ಸಿದ್ದಾಪುರ : ತಾಲೂಕಿನ ಹಲವೆಡೆ ಪೊಲೀಸರು ದಾಳಿ ನಡೆಸಿ ಅನಧಿಕೃತವಾಗಿ ಮದ್ಯ ಸೇವನೆಗೆ ಅವಕಾಶ ನೀಡಿದ 7 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ
ಯಾವುದೇ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದವರ ಮೇಲೆ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ ಕೆ,
ಪಿ ಎಸ್ ಐ ಗಳಾದ ಎಂ ಜಿ ಕುಂಬಾರ, ಮಲ್ಲಿಕಾರ್ಜುನ ಕೊರಣಿ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಮದ್ಯದ ಪ್ಯಾಕೆಟ್ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ವಶಕ್ಕೆ ಪಡೆದು ನಾಗೇಶ್ ಗಣಪತಿ ಕೊಡಿಯ ಕರ್ಕಿಹಕ್ಲು, ಬಸವಣ್ಣಿ ಚೌಡ ಚನ್ನಯ್ಯ ಮರಲಗಿ, ಮಂಜುನಾಥ್ ತಿಮ್ಮ ನಾಯ್ಕ್ ಹೆಗ್ಗರಣಿ,ರಮಾನಂದ ದಾಸ ನಾಯ್ಕ್ ಹಸ್ವಿ ಗುಳಿ, ನಾರಾಯಣ ರಾಮ ನಾಯ್ಕ್ ಕ್ಯಾದಗಿ, ಷಣ್ಮುಖ ಚನ್ನಬಸಪ್ಪ ಗೌಡ ಬಾಳೆಕೊಪ್ಪ, ಗಣೇಶ ರಾಮ ನಾಯ್ಕ್ ಡೊಂಬೆ ಸರಕುಳಿ ಇವರುಗಳ ಮೇಲೆ ಪ್ರಕರಣ ದಾಖಳಿಸಿದ್ದಾರೆ.