ಅಂಕೋಲಾ : ನಗರದ ಪಿ.ಎಂ.ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಉದ್ಘಾಟನೆಗೊಂಡಿತು. ಪತ್ರಕರ್ತ ನಾಗರಾಜ ಜಾಂಬಳೇಕರ ದೀಪ ಬೆಳಗಿಸಿ ನೂತನ ಶಾಲಾ ಸಂಸತ್ತನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಶಾಲೆಯಲ್ಲಿ ಸಂಸತ್ತನ್ನು ರಚಿಸುವದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಉತ್ತಮ ಆಡಳಿತ ನಡೆಸುವ ಕೌಶಲ್ಯ ವೃದ್ಧಿಯಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಚುನಾವಣೆ ನಡೆಯುವಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅನೇಕ ತರಹದ ಚುನಾವಣೆಗಳು ಎದುರಾಗುತ್ತಲೇ ಇರುತ್ತವೆ. ನಮ್ಮ ಗೌರವಯುತವಾದ ಮತ ಗೌರವಯುತ ಅಬ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಶಾಲಾ ಹಂತದಲ್ಲಿಯೇ ಶಿಸ್ತು ಮತ್ತು ಸಂಘಟನೆಯ ಪರಿಕಲ್ಪನೆ ಇಂತಹ ಸಂಸತ್ತು ರಚನೆಯಿಂದ ಲಭಿಸುತ್ತವೆ. ಅಲ್ಲದೆ ವಿದ್ಯಾರ್ಥಿಗಳು ಚುನಾವಣೆ, ಸರಕಾರ, ಬಜೆಟ್ ಮುಂತಾದವುಗಳ ಬಗ್ಗೆ ಜ್ಞಾನವನ್ನೂ ಹೊಂದಿರಬೇಕು ಎಂದರು. ಮುಖ್ಯಾಧ್ಯಾಪಕರಾದ ಚಂದ್ರಶೇಖರ ಕಡೇಮನಿ ಮಾತನಾಡಿ ಒಂದು ದೇಶ ಸದೃಢವಾಗಿರಬೇಕಾದರೆ ಆ ದೇಶದ ಸಂಸತ್ತು ಉತ್ತಮವಾಗಿರಬೇಕು. ಮತದಾನ ತನ್ನದೇ ಆದ ಘನತೆಯನ್ನು ಹೊಂದಿದೆ. ಅದೇ ರೀತ ವಿದ್ಯಾರ್ಥಿಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಶಾಲೆಯ ಶಿಸ್ತನ್ನು ಕಾಪಾಡಲು ಮತ್ತು ಕಾರ್ಯಚಟುವಟಿಕೆಗಳನ್ನು ನಡೆಸಲು ಬದ್ದರಾಗಿರಬೇಕು ಹಾಗೂ ವಿದ್ಯಾರ್ಥಿಗಳೂ ಕೂಡ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ ಸಹಕರಿಸಬೇಕು ಎಂದರು.
ವೇದಿಕೆಯಲ್ಲಿ ಮುಖ್ಯಾಧ್ಯಾಪಕಿ ಹಿರಿಯ ಶಿಕ್ಷಕಿ ಶೀಲಾ ಐ ಬಂಟ, ಶಿಕ್ಷಕಿ ನಯನಾ ನಾಯಕ ಉಪಸ್ಥಿತರಿದ್ದರು.
ಶಾಲಾ ಸಂಸತ್ತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಮನೋಜ ಎಂ ನಾಯ್ಕ, ಉಪ ಕಾರ್ಯದರ್ಶಿಯಾಗಿ ಚೇತನಾ ರಾಜು ಗಾಂವಕರ, ಕ್ರೀಡೆ ಮತ್ತು ಸಾಹಸ ಸಮಿತಿ ಕಾರ್ಯದರ್ಶಿಯಾಗಿ ಕುಮಾರ ನಾಗೇಂದ್ರ ಮೆಥಾ, ಸಾಂಸ್ಕ್ರತಿಕ ಸಮಿತಿ ಕಾರ್ಯದರ್ಶಿಯಾಗಿ ಜಾಹ್ನವಿ ನಾನಾ ಮೋರೆ, ಸ್ವಚ್ಛತೆ ಮತ್ತು ಶಿಸ್ತು ಸಮಿತಿ ಕಾರ್ಯದರ್ಶಿಯಾಗಿ ಸುನಾದ ಜೆ ಖಾರ್ವಿ, ಹೂದೋಟ ಸಮಿತಿ ಕಾರ್ಯದರ್ಶಿಯಾಗಿ ಸಾನಿಕಾ ಎನ್ ಮುಕ್ರಿ, ವಾಚನಾಲಯ ಸಮಿತಿ ಕಾರ್ಯದರ್ಶಿಯಾಗಿ ಅರ್ಚನಾ ಅಣ್ಣಪ್ಪ ನಾಯ್ಕ ಆಯ್ಕೆಯಾಗಿದ್ದು ನೂತನವಾಗಿ ಆಯ್ಕೆಯಾದ ಪ್ರತಿನಿಧಿಗಳಿಗೆ ಮತ್ತು ವರ್ಗವಾರು ಸದಸ್ಯರಿಗೆ ದೈಹಿಕ ಶಿಕ್ಷಕ ರಾಜೇಶ ನಾಯಕ ಪ್ರತಿಜ್ಞಾ ವಿಧಿ ಬೋಧಿಸಿದರು.
ಶಿಕ್ಷಕ ಹಾಗೂ ಎನ್ ಸಿ ಸಿ ಕಮಾಂಡರ್ ಜಿ ಆರ್ ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಹೈಸ್ಕೂಲಿನ ಶಿಕ್ಷಕರಾದ ಜಿ ಎಸ್ ನಾಯ್ಕ, ರಾಘವೇಂದ್ರ ಮಹಾಲೆ, ಮುಗ್ದುಂ ಅಲಗೋಡಿ, ಶಿಕ್ಷಕಿ ರೇಶ್ಮಾ ಮಾನಕಾಮೆ, ಶೃತಿ ನಾಯ್ಕ, ನೇತ್ರಾವತಿ ನಾಯ್ಕ ಹಾಜರಿದ್ದರು