ಹುಬ್ಬಳ್ಳಿಯ ಜನನಿಬಿಡ ರಸ್ತೆಯಲ್ಲಿ ಬಿದ್ದ ಬೃಹದಾಕಾರದ ಕಬ್ಬಿಣದ ಕಂಬ: ತಪ್ಪಿದ ಭಾರೀ ದುರಂತ..!

ಹುಬ್ಬಳ್ಳಿ(ಜೂ.28):  ಬೃಹದಾಕಾರದ ಕಬ್ಬಿಣದ ಕಂಬವೊಂದು ನೆಲಕ್ಕಪ್ಪಳಿಸಿದ ಘಟನೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಬಳಿ ನಿನ್ನೆ(ಮಂಗಳವಾರ) ನಡೆದಿದೆ. ಬೈಕ್ ಸವಾರರೊಬ್ಬರು ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ಎದೆ ಝಲ್ ಎನ್ನುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರೈಲ್ವೇ ಬ್ರಿಡ್ಜ್‌‌ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸಲು ಹಾಕಲಾಗಿದ್ದ ಕಬ್ಬಿಣದ ಬೃಹತ್ ಕಂಬ ತುಕ್ಕು ಹಿಡಿದು ತನ್ನಷ್ಟಕ್ಕೆ ತಾನೆ ಬಿದ್ದಿದೆ. ಬಸ್, ಕಾರು, ದ್ವಿಚಕ್ರ ವಾಹನಗಳು ಹಾಯ್ದು ಹೋದ ಕಾಲವೇ ಕ್ಷಣಗಳಲ್ಲಿ ಕಂಬ ಉರುಳಿ ಬಿದ್ದಿದೆ. ಬಸ್ ಅಥವಾ ಕಾರಗಳ ಮೇಲೆ ಬಿದ್ದಿದ್ದರೇ ದೊಡ್ಡ ಅನಾಹುತವೊಂದು ನಡೆದು ಹೋಗುತ್ತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾಣಿ ಸಂಭವಿಸಿಲ್ಲ. 

ಅತ್ಯಂತ ಜನದಟ್ಟಣೆಯ ಪ್ರದೇಶ ಹಾಗೂ ಹುಬ್ಬಳ್ಳಿ-ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ನಿರ್ಲಕ್ಷ್ಯ ವಹಿಸಿದ ರೈಲ್ವೆ ಅಧಿಕಾರಗಳ ವಿರುದ್ಧ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.