ಯಲ್ಲಾಪುರದ ಗೌಳಿವಾಡ ಸ.ಹಿ.ಪ್ರಾ ಶಾಲೆಯಲ್ಲಿ( ಐ ಎಫ್ ಎ) ಬೆಂಗಳೂರು ಇವರ ಆಶ್ರಯದಲ್ಲಿ “ರದ್ಮಾಲ್ ಮತ್ತು ಕಲಾ ಅಂತರ್ಗತ ಕಲಿಕೆ” ಕಾರ್ಯಗಾರ


ಯಲ್ಲಾಪುರ : ತಾಲೂಕಿನ ಅಲ್ಕೇರಿ ಗೌಳಿವಾಡ ಸ.ಹಿ.ಪ್ರಾ ಶಾಲೆಯಲ್ಲಿ “ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್”( ಐ ಎಫ್ ಎ) ಬೆಂಗಳೂರು ಇವರ ಆಶ್ರಯದಲ್ಲಿ 5, 6, 7ನೇ ತರಗತಿಯ ಮಕ್ಕಳಿಗೆ “ರದ್ಮಾಲ್ ಮತ್ತು ಕಲಾ ಅಂತರ್ಗತ ಕಲಿಕೆ”ಎಂಬ ವಿನೂತನ ಕಲಿಕಾ ಪ್ರಯೋಗದ ಕಾರ್ಯಗಾರವನ್ನು ನಡೆಸಲಾಗುತ್ತಿದೆ.
ಶಾಲೆಯ ಶಿಕ್ಷಕ ಗಂಗಾಧರ ಲಮಾಣಿ ಗೌಳಿಗರ “ರದ್ಮಾಲ” ಜಾನಪದ ನೃತ್ಯ ಕಲೆಯನ್ನು ತರಗತಿ ಕೋಣೆಯೊಳಗೆ ತಂದು 5,6,7 ತರಗತಿಯ ಆಯ್ದ ಕನ್ನಡದ ಪದ್ಯಗಳನ್ನು ಈ ನೃತ್ಯ ಶೈಲಿಗೆ ಒಳಪಡಿಸಿ ಮಕ್ಕಳಿಗೆ ಕಲಾ ಅಂತರ್ಗತ ಕಲಿಕೆಯ ಕಾರ್ಯಗಾರ ನಡೆಸುತ್ತಿದ್ದಾರೆ.
ಸ್ಥಳೀಯ ಜಾನಪದ “ಕಲೆಯ ಮೂಲಕ ಕಲಿಕೆ”ಯು ಸುಲಭವಾಗಿಸುವ ಉದ್ದೇಶದಿಂದ, ಶಾಲಾ ಅವಧಿಯಲ್ಲಿ ಬೇರೆ ತರಗತಿಗಳಿಗೆ ತೊಂದರೆಯಾಗದಂತೆ ಶಾಲಾ ಅವಧಿಯ ನಂತರದಲ್ಲಿ ಪಾಲಕರ,ಸಮುದಾಯದ ಮತ್ತು ಮಕ್ಕಳ ಸಹಕಾರ ಪಡೆದು ಕಾರ್ಯಗಾರ ನಡೆಸುತ್ತಿದ್ದಾರೆ. ಶಿಕ್ಷಕರಾದ ಶುಭಾ ಗುನಿಗಿ ಮತ್ತು ವಾಣಿ ನಾಯ್ಕ ಇದಕ್ಕೆ ಸಹಕಾರಿಯಾಗಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಸ್ಥಳೀಯ ಜಾನಪದ ಕಲಾವಿದರಾದ ವಿಠ್ಠು ಬಿಚುಕ್ಲೆ ,ದಾಖ್ಲು ಜಾನ್ಕರ, ಲಕ್ಷ್ಮಣ್ ಯಮ್ಕರ್,ಚಿಮಣು ಜಾನ್ಕರ,ಯಮ್ಮು ಬಿಚುಕ್ಲೆ ಸೋನು,ಜಾನ್ಕರ,ರಾಮು ಜೋರೆ ಧೋಂಡು ಮಲಗೊಂಡೆ ಜಿಮ್ಮು ಜೋರೆ ಇತರರು ಭಾಗವಹಿಸುತ್ತಿದ್ದಾರೆ.