ತೆಲಂಗಾಣದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಸಂಚಲನ ಮೂಡಿಸುತ್ತಿವೆ. ಗುಜರಾತಿನ ಭಯೋತ್ಪಾದಕ ಶಂಕಿತನ ಜೊತೆ ರಾಮಗುಂಡಂ ಯುವತಿ ಚಾಟ್ ಮಾಡಿರುವುದು ಇದೀಗ ಸಂಚಲನ ಮೂಡಿಸಿದೆ. ಫೇಸ್‌ಬುಕ್ (Facebook) ಮೂಲಕ ನಡೆದಿರುವ ಚಾಟಿಂಗ್ ಸಾಮಾನ್ಯ ಸಂಭಾಷಣೆಯಾಗಿದೆಯೇ ಅಥವಾ ಅದಕ್ಕೆ ಬೇರೆ ಯಾವುದಾದರೂ ಕೋನವಿದೆಯೇ ಎಂದು ಭಯೋತ್ಪಾದನ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಸದ್ಯ ಅನುಮಾನವಷ್ಟೇ ಇದೆ ಎಂದು ಹೇಳಿರುವ ಗುಜರಾತ್ ಎಟಿಎಸ್ ಅಧಿಕಾರಿಗಳು, ಯುವತಿಯನ್ನು ವಿಚಾರಣೆ ನಡೆಸಿದ ಬಳಿಕ ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ.
ಹೈದರಾಬಾದ್‌ಗೆ ಧಾವಿಸಿ ಬಂದಿರುವ ಗುಜರಾತ್ ಎಟಿಎಸ್ ಅಧಿಕಾರಿಗಳು ಯುವತಿಯ ಫೋನ್ ಸಂಭಾಷಣೆಗಳು, ಫೇಸ್‌ಬುಕ್ ಚಾಟಿಂಗ್ ಮುಂತಾದ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಎಟಿಎಸ್ ಮಾಹಿತಿ ಪ್ರಕಾರ ಹುಡುಗಿಯ ವಯಸ್ಸು 18 ವರ್ಷಗಳು. ಆರನೇ ತರಗತಿಯ ನಂತರ ಅವಳು ಓದುವುದನ್ನು ನಿಲ್ಲಿಸಿದ್ದಾಳೆ.
ಮೊಬೈಲ್ ಇದ್ದರೆ ಆಗಾಗ ಗೇಮ್ ಆಡುತ್ತಾಳೆ ಅಂದುಕೊಂಡಿದ್ದೆವು ಎನ್ನುತ್ತಾರೆ ಆ ಯುವತಿಯ ಪಾಲಕರು. ಎಟಿಎಸ್ ಅಧಿಕಾರಿಗಳು ಬರುವವರೆಗೂ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಅಥವಾ ಅವರ ಚಾಟ್‌ಗಳ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಪೋಷಕರು ಆತಂಕದ ದನಿಯಲ್ಲಿ ಹೇಳಿದ್ದಾರೆ. ಆದರೆ ಈ ಹೇಳಿಕೆಯು ಕೇವಲ ಅನುಮಾನಾಸ್ಪದವಾಗಿದೆ ಮತ್ತು ಯಾವುದೇ ಭಯೋತ್ಪಾದನೆಯ ಅಂಶವನ್ನು ದೃಢಪಡಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಎಟಿಎಸ್ ಅಧಿಕಾರಿಗಳು ಹೈದರಾಬಾದ್‌ನಲ್ಲಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಹೈದರಾಬಾದ್‌ನ ಹಲವು ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ರಾಮಗುಂಡಂನಲ್ಲಿ ಒಬ್ಬರನ್ನು, ವಾರಂಗಲ್‌ನ ಇಬ್ಬರು ಮತ್ತು ಹೈದರಾಬಾದ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆಯಂತೆ. ಸೋಮವಾರ ರಾತ್ರಿ ಕಾಲಾಪತ್ತಾರ್ (41) ಎಂಬುವರನ್ನು ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಟೋಲಿ ಚೌಕಿ ನಿವಾಸಿ ಮೊಹಮ್ಮದ್ ಜಾವೀದ್ ಸಹ ಬಂಧಿತ ಆರೋಪಿ.
ಜಾವೀದ್ ಅಮೀರ್ ಪೇಟ್ನ ಕೋಚಿಂಗ್ ಸೆಂಟರ್‌ನಲ್ಲಿ ಸಾಫ್ಟ್‌ವೇರ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾನೆ. ಬಕ್ರೀದ್ ನಿಮಿತ್ತ ನಾಲ್ಕು ದಿನಗಳ ಹಿಂದೆ ಮಗಳೊಂದಿಗೆ ರಾಮಗುಂಡಕ್ಕೆ ಹೋಗಿದ್ದ. ಜಾವೀದ್ ಗೆ ಸೇರಿದ ಕೋಚಿಂಗ್ ಸೆಂಟರ್ ನ ಚಟುವಟಿಕೆಗಳ ಬಗ್ಗೆ ಎಟಿಎಸ್ ವಿಚಾರಣೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಅಮೀರ್ ಪೇಟೆಯ gಲ್ಲಿ ಗಲ್ಲಿಗಳನ್ನು ಜರಡಿ ಹಿಡಿಯಲಾಗುತ್ತಿದೆ.
ಇನ್ನೂ ನಾಲ್ಕು ಕೋಚಿಂಗ್ ಸೆಂಟರ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಉಗ್ರನಿಗೆ ಕೋಚಿಂಗ್ ರೂಪದಲ್ಲಿ ತರಬೇತಿ ನೀಡಲಾಗಿದೆ ಎಂದು ಗುಜರಾತ್ ಎಟಿಎಸ್ ಅಧಿಕಾರಿಗಳು ಶಂಕಿಸಿದ್ದಾರೆ. ಎಟಿಎಸ್ ಅಧಿಕಾರಿಗಳು ಅದರ ವಿವರಗಳನ್ನು ಸಂಪೂರ್ಣವಾಗಿ ತನಿಖೆ ಮಾಡುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ.