ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಅಧಿಕ ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆ ಈ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಗೇಟ್ಆರಂಭಕ್ಕೆ ಸಜ್ಜಾಗಿದೆ. ಜುಲೈ 1ರಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭವಾಗಲಿದೆ. ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾ ನಿರ್ಮಿಸಿದೆ. ಹಾಗಾದ್ರೆ, ಯಾವ-ಯಾವ ವಾಹನಗಳಿಗೆ ಎಷ್ಟೆಷ್ಟು ಹಣ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಏಕಮುಖ ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣ
- ಕಾರು, ಜೀಪು, ವ್ಯಾನು – 155 ರೂ.
- ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂ.
- ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 525 ರೂ
- ಮೂರು ಆಕ್ಸಲ್ ವಾಣಿಜ್ಯ ವಾಹನ – 575 ರೂ.
- ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – 825 ರೂ.
- ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1005 ರೂ.
ಅದೇ ದಿನ ಹೋಗಿಬರುವುದಕ್ಕೆ (up and down Toll)
- ಕಾರು, ಜೀಪು, ವ್ಯಾನು – 235 ರೂ
- ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 375 ರೂ
- ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 790 ರೂ
- ಮೂರು ಆಕ್ಸಲ್ ವಾಣಿಜ್ಯ ವಾಹನ – 860 ರೂ
- ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – 1240 ರೂ
- ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1510 ರೂ
ಮಂಡ್ಯ ಜಿಲ್ಲೆ ಒಳಗಿನ ವಾಹನಗಳಿಗೆ
- ಕಾರು, ಜೀಪು, ವ್ಯಾನು – 80 ರೂ.
- ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 125 ರೂ.
- ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 265 ರೂ.
- ಮೂರು ಆಕ್ಸಲ್ ವಾಣಿಜ್ಯ ವಾಹನ – 285 ರೂ
- ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಕ್ಸಲ್ ಗಳದ್ದು) – 415 ರೂ
- ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 505 ರೂ