ದಾಂಡೇಲಿ : ಬಂಗೂರನಗರ ಪದವಿ ಕಾಲೇಜಿನಲ್ಲಿ ಸೋಮವಾರ ಹಳೆ ವಿದ್ಯಾರ್ಥಿಗಳ ಸಂಘಕ್ಕೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ ಅವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷರಾಗಿ ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿಯವರನ್ನು ಮತ್ತು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಎಸ್.ಸೋಮಕುಮಾರ್ ಅವರನ್ನು ಆಯ್ಕೆ ಮಾಡಲಾಯ್ತು.
ಸಂಘದ ಉಪಾಧ್ಯಕ್ಷರಾಗಿ ವಾಸುದೇವ ಪ್ರಭು, ಕಾರ್ಯಾಧ್ಯಕ್ಷರಾಗಿ ಮಹಾಂತೇಶ್ ಜುಗತಿಮಠ, ಖಜಾಂಚಿಯಾಗಿ ಡಾ.ತೃಪ್ತಿ ನಾಯಕ, ಸಹ ಕಾರ್ಯದರ್ಶಿಯಾಗಿ ರೇಷ್ಮಾ ಕುಮಾರ್ ಕರಗಯ್ಯ ಅವರನ್ನು ಆಯ್ಕೆ ಮಾಡಲಾಯ್ತು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ್ ಹಾಗೂ ಹಳೆ ವಿದ್ಯಾರ್ಥಿಗಳಾದ ಡಾ.ಅನಿತಾ ನಾಯರ್, ಇಮಾಮ್ ಸರ್ವರ್, ನವೀನ್ ಕಾಮತ್, ಶಶಿಧರ್ ಕದಂ, ಎಸ್.ಚಂದ್ರಶೇಖರ್, ರಾಜೇಶ್ ವೆರ್ಣೇಕರ್, ಸುನೀಲ್ ಪಡವಳಕರ್ ಮತ್ತು ಶ್ವೇತಾ ಜಾಧವ್ ಹಾಗೂ ಲೆಕ್ಕ ಪರಿಶೋಧಕರಾಗಿ ಸಚಿನ್ ಕಾಮತ್ ಅವರನ್ನು ಆಯ್ಕೆ ಮಾಡಲಾಯ್ತು.