ಜೋಯಿಡಾ : ತಾಲ್ಲೂಕಿನ ಪ್ರಧಾನಿ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿರುವ ಬಾಮಣಗಿಯಲ್ಲಿರುವ ಶ್ರೀ.ಜಲ್ಮೇಶ್ವರ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಟಾಪನಾ ಪೂಜಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯ್ತು.
ಕಳೆದ ಅನೇಕ ವರ್ಷಗಳಿಂದ ಗುಡಿಯಲ್ಲಿ ಕಲ್ಲುಗಳನ್ನಿಟ್ಟು ಆರಾಧಿಸಿಕೊಂಡು ಬರಲಾಗುತ್ತಿದ್ದ ಈ ದೇವಸ್ಥಾನದಲ್ಲಿ ಇದೀಗ ಶಿವಲಿಂಗ ಮತ್ತು ನಂದಿ ಮೂರ್ತಿಯ ಪ್ರತಿಷ್ಪಾಪನಾ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದೆ. ಇಂದು ಬೆಳಿಗ್ಗೆ ಮೂರ್ತಿಗಳ ಭವ್ಯ ಶೋಭಾಯಾತ್ರೆಯು ಬಾಮಣಗಿ ಗ್ರಾಮದಲ್ಲಿ ಸಂಭ್ರಮ, ಸಡಗರದಿಂದ ಜರುಗಿತು. ಪ್ರತಿಷ್ಟಾಪನಾ ಪೂಜಾ ಕಾರ್ಯಕ್ರಮದ ಯಶಸ್ಸಿಗೆ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಸ್ಥಳೀಯ ಗ್ರಾಮಸ್ಥರು, ಭಕ್ತಾಭಿಮಾನಿಗಳು ಶ್ರಮಿಸುತ್ತಿದ್ದಾರೆ.