ನಮ್ಮ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಬಳಸುತ್ತೇವೆ. ಶಾಪಿಂಗ್ ಮಾಡಿದಾಗ ಹಣ ಪಾವತಿಗೆ ಡೆಬಿಟ್ ಕಾರ್ಡ್ ಬಳಸುತ್ತೇವೆ. ನಾವು ಈ ಡೆಬಿಟ್ ಕಾರ್ಡ್ಗಳನ್ನು ಕಳೆದುಕೊಳ್ಳುವ ಅಥವಾ ಕಳುವಾಗುವ ಸಂದರ್ಭ ಬರಬಹುದು. ದುಷ್ಕರ್ಮಿಗಳು ನಿಮ್ಮ ಕಾರ್ಡನ್ನು ದುರುಪಯೋಗಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಅಂಥ ಸಂದರ್ಭದಲ್ಲಿ ಏನು ಮಾಡಬೇಕು? ಕಳುವಾದ ಆ ಡೆಬಿಟ್ ಕಾರ್ಡನ್ನು ಕೂಡಲೇ ನಿಷ್ಕ್ರಿಯಗೊಳಿಸಬೇಕು. ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಡೆಬಿಟ್ ಕಾರ್ಡ್ ನಿಮ್ಮದಾಗಿದ್ದರೆ ಮೂರ್ನಾಲ್ಕು ಸುಲಭ ವಿಧಾನಗಳಲ್ಲಿ ಅದನ್ನು ನಿಷ್ಕ್ರಿಯಗೊಳಿಸಬಹುದು. ಎಸ್ಬಿಐನ ಟಾಲ್ಫ್ರೀ ನಂಬರ್, ಎಸ್ಸೆಮ್ಮೆಸ್ ಮತ್ತು ನೆಟ್ಬ್ಯಾಂಕಿಂಗ್ ಮೂಲಕ ಕಾರ್ಡ್ ನಿಷ್ಕ್ರಿಯಗೊಳಿಸಲು ಸಾಧ್ಯ.
ಎಸ್ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಲು ಟಾಲ್ ಫ್ರೀ ನಂಬರ್
ಕಳುವಾದ ನಿಮ್ಮ ಎಸ್ಬಿಐ ಡೆಬಿಟ್ ಕಾರ್ಡನ್ನು ಬಹಲ ಸುಲಭವಾಗಿ ನಿಷ್ಕ್ರಿಯಗೊಳಿಸುವ ವಿಧಾನ ಎಂದರೆ ಅದು ಟಾಲ್ ಫ್ರೀ ನಂಬರ್ಗೆ ಡಯಲ್ ಮಾಡುವುದು. ನೀವು 1800 112211 ಅಥವಾ 1800 4253800 ನಂಬರ್ಗೆ ಕರೆ ಮಾಡುವ ಮೂಲಕ ಡೆಬಿಟ್ ಕಾರ್ಡ್ ನಿಷ್ಕ್ರಿಯಗೊಳಿಸಲು ಸಾಧ್ಯ. ಬ್ಯಾಂಕ್ಗೆ ಜೋಡಿತವಾದ ನಿಮ್ಮ ಮೊಬೈಲ್ ನಂಬರ್ನಿಂದ ಕರೆ ಮಾಡಬೇಕು.
ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಎಸ್ಬಿಐ ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವ ವಿಧಾನ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಆಗಿ. ಅದರ ವಿಳಾಸ onlinesbi.com
- ಲಾಗಿನ್ ಆದ ಬಳಿಕ ಇ–ಸರ್ವಿಸ್ ಸೆಕ್ಷನ್ಗೆ ಹೋಗಿ
- ಎಟಿಎಂ ಕಾರ್ಡ್ ಸರ್ವಿಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಬ್ಲಾಕ್ ಎಟಿಎಂ ಕಾರ್ಡ್ ಅನ್ನು ಒತ್ತಿರಿ
- ಕಾರ್ಡ್ಗೆ ಜೋಡಿತವಾದ ಖಾತೆಯನ್ನು ಆರಿಸಿ
- ಆ ಖಾತೆಗೆ ಸಂಬಂಧಿತವಾದ ಎಲ್ಲಾ ಕಾರ್ಡ್ಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ಬ್ಲಾಕ್ ಆಗಿರುವ, ನಿಷ್ಕ್ರಿಯವಾಗಿರುವ ಮತ್ತು ಚಾಲ್ತಿಯಲ್ಲಿರುವ ಎಲ್ಲಾ ಕಾರ್ಡ್ಗಳೂ ಕಾಣುತ್ತವೆ. ಈ ಕಾರ್ಡ್ಗಳ ಮೊದಲ ನಾಲ್ಕು ಮತ್ತು ಕೊನೆಯ ನಾಲ್ಕು ಅಂಕಿಗಳು ಕಾಣುತ್ತವೆ.
- ನೀವು ಈ ಪಟ್ಟಿಯಲ್ಲಿ ಬ್ಲಾಕ್ ಮಾಡಬೇಕೆಂದಿರುವ ಕಾರ್ಡನ್ನು ಆರಿಸಿಕೊಳ್ಳಿ
- ಬ್ಲಾಕ್ ಮಾಡುವುದಕ್ಕೆ ಕಾರಣ ಏನೆಂದು ನಮೂದಿಸಿ.
- ನಂತರ, ಸಬ್ಮಿಟ್ ಕೊಡಿ.