ಬೆಳಗಾವಿ: ರಾಜ್ಯಾಧ್ಯಕ್ಷ ಯಾರು ಆಗಬೇಕೆಂದು ಬಹಿರಂಗ ಚರ್ಚೆ ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರಿಂದಲೇ ಆಯ್ಕೆಯಾಗುತ್ತಾರೆ. ನಳಿನ್ ಕುಮಾರ್ ಕಟೀಲ್ ಅವರ ಅವಧಿ ಮುಗಿದಿದೆ ಎಂದು ಗೊತ್ತಾಗಿದೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾಗಬೇಕೆಂದು ಎಲ್ಲರಿಗೂ ಆಸೆ ಇರುತ್ತೆ. ನಾನು ಕೂಡ BJP ಹಿರಿಯ ನಾಯಕ. ಪಕ್ಷ ಅವಕಾಶ ಕೊಟ್ಟರೆ ನಾನು ಕೂಡ ರಾಜ್ಯಾಧ್ಯಕ್ಷನಾಗುವೆ. ಬಿಜೆಪಿಯಲ್ಲಿ ದಲಿತರು ರಾಜ್ಯ ಘಟಕದ ಅಧ್ಯಕ್ಷ ಆಗಬಾರದೇ? ಎಂದು ಸಂಸದ ರಮೇಶ್ ಜಿಗಜಿಣಗಿ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೇಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರ ಎಲ್ಲಿ ಕೇಳಬೇಕು ಎಂಬುದು ನನಗೆ ಗೊತ್ತಿದೆ ಅದನ್ನ ಬಹಿರಂಗವಾಗಿ ಹೇಳುವುದಿಲ್ಲ. ಚುನಾವಣೆಯಲ್ಲಿ ಸೋಲು, ಗೆಲವು ಸಹಜ ಯಾರು ನಿರಾಶೆ ಆಗಬಾರದು. ಮತ್ತೆ ಕೆಲಸ ಆರಂಭಿಸಬೇಕು ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.
ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರ ಕಡೆ ಗಮನ ಹರಿಸಬೇಕು. ಮಂತ್ರಿಗಳಿದ್ದವರು, ಅಧಿಕಾರದಲ್ಲಿದ್ದವರು ಕಾರ್ಯಕರ್ತರ ಕಡೆ ಗಮನ ಕೊಡಬೇಕು. ಯಾರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇದನ್ನು ಹೇಳಿಲ್ಲ. ಸಂಘಟನೆಯ ಬಗ್ಗೆ ಹೆಚ್ಚು ಗಮನಹಿರಸಬೇಕು. ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟರು.
ಅಕ್ಕಿ ನಿಮಗೆ ಕೊಡುವ ಯೋಗ್ಯತೆ ಇಲ್ಲಾ ಅಂದರೇನಾವಣೆ ಸುಳ್ಳು ಹೇಳಿ ಯಾಕೆ ವೋಟ್ ತೆಗೆದುಕೊಂಡರಿ? ಬಡವರ ಬಗ್ಗೆ ಬಹಳ ಮಾತಾಡುತ್ತೀರಿ ಈಗ ಅಕ್ಕಿ ಕೊಡಿ. ಬಡವರನ್ನು ಗುತ್ತಿಗೆ ಹಿಡಿದಿದ್ದೀರಾ ಇದೆಲ್ಲಾ ನಾಟಕ ಬಿಡಿ. ನಿಮ್ಮ ಸಹಾಯಕ್ಕೆ ಯಾರು ಬರಬೇಕು ನಿಮ್ಮ ನಾಯಕರು ಬರಬೇಕು. ನಿದ್ದೆಗಣ್ಣಲು ಅಕ್ಕಿ ಕೊಟ್ಟಿಲ್ಲಾ ಅಂತಾ ಬಡಬಡಿಸುತ್ತಿದ್ದೀರಿ. ಈ ಸರ್ಕಾರ ಬಹಳ ದಿನ ನಡೆಯುವುದಿಲ್ಲ. ಅವರ ಪಕ್ಷದವರೇ ಎಡಕ್ಕೆ ಬಲಕ್ಕೆ ನೋಡುತ್ತಿದ್ದಾರೆ. ಸುಳ್ಳು ಹೇಳಿ ವೋಟ್ ತಗೊಂಡಿರೀ ಬಹಳ ದಿನ ಉಳಿಯುವುದಿಲ್ಲ. ಸುಳ್ಳು ಹೇಳಿ ವೋಟ್ ತಗೊಂಡಿದ್ದಾರೆ ಇದೇ ನಾಟಕ ಲೋಕಸಭಾ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.