ದಾಂಡೇಲಿ : ನಗರದ ಲಯನ್ಸ್ ಕ್ಲಬ್ ನ 2023-24ನೇ ಸಾಲಿನ ಅಧ್ಯಕ್ಷರಾಗಿ ನಗರದ ಪ್ರವಾಸೋದ್ಯಮಿ ವೀರೇಶ್ ಯರಗೇರಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕ್ಲಬ್ ನ ಪ್ರಧಾನ ಕಾರ್ಯದರ್ಶಿಯಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಧಿಕಾರಿ ರವಿ.ಎಸ್.ಪೈ ಅವರನ್ನು ಆಯ್ಕೆ ಮಾಡಲಾಗಿದೆ.
ಖಜಾಂಚಿಯಾಗಿ ಉದ್ಯಮಿ ಇಮ್ತಿಯಾಜ್ ಅಹ್ಮದ್ ಅತ್ತಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲಯನ್ಸ್ ಕ್ಲಬಿನ ನಿಕಟಪೂರ್ವ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.