ಸಿನಿಮೀಯ ರೀತಿಯಲ್ಲಿ ತಮಿಳು ರ‍್ಯಾಪರ್ ದೇವಾನಂದ್ ಅಪಹರಣ

ತಮಿಳು ರ‍್ಯಾಪರ್ ದೇವಾನಂದ್ ಅನ್ನು ಕೆಲ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಪಹರಣ  ಮಾಡಿದ್ದಾರೆ. ಅಪಹರಣದ ವಿಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ಸ್ವತಃ ಪೊಲೀಸರೊಟ್ಟಿಗೆ ಅಪಹರಣಕ್ಕೊಳಗಾದ ಸಿನಿಮೀಯ ರೀತಿಯಲ್ಲಿ ತಮಿಳು ರ‍್ಯಾಪರ್ ದೇವಾನಂದ್ ಅಪಹರಣಕ್ಕೊಳಗಾಗಿರುವ ರ‍್ಯಾಪರ್ ದೇವಾನಂದ್ ಮಾತನಾಡಿದ್ದಾರೆ.

ಮಧುರೈನವರಾದ ರ‍್ಯಾಪರ್ ದೇವಾನಂದ್, ವಿಶ್ವ ಸಂಗೀತದ ದಿನದ ಅಂಗವಾಗಿ ನಂಗಂಭಾಕ್ಕಂನ ಹೋಟೆಲ್ ಒಂದರಲ್ಲಿ ಆಯೋಜಿತವಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಂದ ಗೆಳೆಯರಾದ ಕಲ್ಪನ್ ಗಿರೀಶ್, ಮೊಹಮ್ಮದ್ ಇಬ್ರಾಹಿಂ, ಕೆವಿನ್ ಅವರೊಟ್ಟಿಗೆ ಕಾರಿನಲ್ಲಿ ಹೊರಟಿದ್ದರು. ತಿರುವೇರ್​ಕಾಡುವಿನ ಮಧುರವಯಾಲ್ ಬೈಪಾಸ್ ವರೆಗೂ ಹೋಗಿ ಅಲ್ಲಿಂದ ಚೆನ್ನೈ-ಬೆಂಗಳೂರು ಹೈವೇಗೆ ಕಾರು ತಿರುಗಿಸಿ ಕಾರು ಮುಂದೆ ಹೋಗಿದೆ. ಈ ಸಮಯದಲ್ಲಿ ಬೈಕ್​ನಲ್ಲಿ ವೇಗವಾಗಿ ಬಂದ ಇಬ್ಬರು ಕಾರಿಗೆ ಟಚ್ ಮಾಡಿದ್ದಾರೆ.

ಕೂಡಲೇ ದೇವಾನಂದ್ ಹಾಗೂ ಗೆಳೆಯರು ಕಾರನ್ನು ನಿಲ್ಲಿಸಿ ಹೊರಗೆ ಬಂದು ಕಾರಿಗೆ ಏನಾಯಿತು ಎಂದು ನೋಡುತ್ತಿರುವಾಗ ಒಂದು ಎಸ್​ಯುವಿ ಬಂದಿದ್ದು ಎಸ್​ವಿಯಲ್ಲಿ ಬಂದ ಎಂಟು ಮಂದಿ ಹಾಗೂ ಕಾರಿಗೆ ಬೈಕ್ ಗುದ್ದಿಸಿದ್ದ ಇಬ್ಬರು ಸೇರಿ ಚಾಕು ತೋರಿಸಿ ಹೆದರಿಸಿ ರ‍್ಯಾಪರ್ ದೇವಾನಂದ್ ಅನ್ನು ಕರೆದುಕೊಂಡು ಹೋಗಿದ್ದಾರೆ. ಕೂಡಲೇ ದೇವಾನಂದ್ ಗೆಳೆಯರು ಹೋಗಿ ತಿರುವೇರ್​ಕಾಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರು ದೇವಾನಂದ್ ಮೊಬೈಲ್​ಗೆ ಕರೆ ಮಾಡಿದಾಗ ಮಾತನಾಡಿದ ದೇವಾನಂದ್, ನನ್ನ ಸಹೋದರ ಸಿರಂಜೀವಿ ತನ್ನ ಬ್ಯುಸಿನೆಸ್​ಗೆ ಸಂಬಂಧಿಸಿದಂತೆ ಐದು ಜನರಿಂದ 2.5 ಕೋಟಿ ಸಾಲ ಪಡೆದಿದ್ದ. ಅದೇ ಕಾರಣಕ್ಕೆ ಕೆಲವರು ನನ್ನ ಅಪಹರಣ ಮಾಡಿದ್ದಾರೆ. ಆದರೆ ನನ್ನ ಮೇಲೆ ಹಲ್ಲೆ ಮಾಡಿಲ್ಲ ನಾನು ಸುಸ್ಥಿತಿಯಲ್ಲಿ ಇದ್ದೀನಿ ಎಂದಿದ್ದಾರೆ. ಆದರೆ ಯಾವ ಸ್ಥಳದಲ್ಲಿ ತಾನು ಇರುವುದು ತನಗೆ ತಿಳಿದಿಲ್ಲವೆಂದು ದೇವಾನಂದ್ ಹೇಳಿದ್ದಾರೆ.

ತಿರುವಾಕ್ಕೂಡು ಪೊಲೀಸರು ಇದೀಗ ದೇವಾನಂದ್ ಅವರನ್ನು ಹುಡುಕಲೆಂದು ವಿಶೇಷ ದಳವನ್ನು ರಚಿಸಿದ್ದು ಹುಡುಕಾಟ ಆರಂಭಿಸಿದ್ದಾರೆ. ದೇವಾನಂದ್ ಅವರ ಮೊಬೈಲ್ ಲೊಕೇಶನ್ ಟ್ರ್ಯಾಪ್ ಮಾಡಲಾಗಿದೆ ಎನ್ನಲಾಗುತ್ತಿದೆ. ದೇವಾನಂದ್ ತಮಿಳಿನ ಜನಪ್ರಿಯ ಯುವ ರ‍್ಯಾಪರ್ ನಲ್ಲಿ ಒಬ್ಬರು. ಇವರ ಅಪಹರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ