ಚಾಕು ತೋರಿಸಿ ಹೆದರಿಸಿದ ಕಳ್ಳನನ್ನು ಅಂಗಡಿಯೊಳಗೆ ಬಂಧಿಸಿದ ಮಾಲೀಕ

ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಈ ಕುರಿತಾದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅಂತಹ ಘಟನೆಗಳಿಗೆ ಪೂರಕ ಎಂಬಂತೆ ಇಲ್ಲೊಂದು ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ಚರ್ಚೆಯಲ್ಲಿದೆ.  ಚಾಕು ಹಿಡಿದು ಬೆದರಿಸಿದ ದರೋಡೆಕೋರನನ್ನು ಅಂಗಡಿಯ ಮಾಲೀಕ ಉಪಾಯದಿಂದ ಅಂಗಡಿಯೊಳಗೆ ಬಂಧಿಸಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಅಂಗಡಿ ಮಾಲೀಕನ ಸಮಯ ಪ್ರಜ್ಞೆ ಹಾಗೂ ಧೈರ್ಯಕ್ಕೆ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ.

 ಕೆಲಹೊತ್ತಿನಲ್ಲೇ ಬಿಲ್​​ ಕೌಂಟರ್​​​​ಗೆ ಬಿಲ್​ ಮಾಡಲು ಬಂದಿದ್ದಾನೆ. ಇದಕ್ಕಿದ್ದ ಹಾಗೆ ಜೇಬಿನಿಂದ ಚಾಕು ತೆಗೆಯುತ್ತಿರುವುದನ್ನು ಜೊತೆಗೆ ಅಂಗಡಿ ಮಾಲೀಕನಿಗೆ ಚಾಕು ತೋರಿಸಿ ಹೆದರಿಸಿರುವುದು ಕಾಣಬಹುದು. ಸ್ಪಲ್ಪ ಹೊತ್ತಿನಲ್ಲೇ ಅಂಗಡಿ ಮಾಲೀಕ ಹೊರಗೆ ಓಡಿ ಅಂಗಡಿಯ ಬಾಗಿಲು ಹಾಕಿದ್ದಾನೆ. ತಪ್ಪಿಸಲು ಯತ್ನಿಸಿದ ಕಳ್ಳ ಬಾಗಿಲಿನ ಎಡೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.