ಹತ್ರಾಸ್‌ನಲ್ಲಿ ಯಾತ್ರಿಕರ ಸಾವು ಪ್ರಕರಣ: ಕರ್ತವ್ಯ ಲೋಪ ಹಿನ್ನೆಲೆ ಎಸ್ ಪಿ ವರ್ಗಾವಣೆ.!

ಉತ್ತರ ಪ್ರದೇಶ: ಯುಪಿಯ ಹತ್ರಾಸ್‌ನಲ್ಲಿ ಕನ್ವರ್ ಆರು ಮಂದಿ ಯಾತ್ರಿಕರು ಸಾವನ್ನಪ್ಪಿದ ಪ್ರರಕಣಕ್ಕೆ ಸಂಬಂಧಪಟ್ಟಂತೆ ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿಯನ್ನು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಯುಪಿ ಸರ್ಕಾರ ವರ್ಗಾವಣೆ ಮಾಡಿದೆ.

ಕನ್ವರ್ ಭಕ್ತರು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನಗಳನ್ನು ನಿಶೇಧಿಸುವಂತೆ ಸರ್ಕಾರ ಸೂಚಿಸಿತ್ತು. ಸರ್ಕಾರಿ ಆದೇಶವನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡು ಎಸ್ ಪಿ ಯನ್ನ ವರ್ಗಾವಣೆಗೊಳಿಸಿದೆ. ಸದ್ಯ ವಿಕಾಸ್ ವೈದ್ಯ ಅವರನ್ನು ಮಿರ್ಜಾಪುರಕ್ಕೆ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ. ಇನ್ನು ಹತ್ರಾಸ್‌ನ ನೂತನ ಎಸ್.ಪಿಯಾಗಿ ದೇವೇಶ್ ಪಾಂಡೆ ಅವರನ್ನ ನೇಮಿಸಲಾಗಿದೆ.

ಶನಿವಾರ ಬೆಳಗ್ಗೆ ಹತ್ರಾಸ್ ಬಳಿ ಎನ್‌ಹೆಚ್-93 ರಲ್ಲಿ ಯಾತ್ರೆಗೆ ತೆರಳುತ್ತಿದ್ದ ಭಕ್ತರ ಮೇಲೆ ಟ್ರಕ್ ಹರಿದು ಘೋರ ದುರಂತ ಸಂಭವಿಸಿತ್ತು. ಘಟನೆಯಲ್ಲು ಆರು ಮಂದಿ ಸಾವನ್ನಪ್ಪಿದ್ದರು.