ರಾಷ್ಟ್ರ ರಾಜಧಾನಿಗೂ ಕಾಲಿಟ್ಟ ಮಂಕಿಪಾಕ್ಸ್.! ದೇಶದಲ್ಲಿ ಒಟ್ಟು 4 ಮಂಕಿಪಾಕ್ಸ್ ಪ್ರಕರಣ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ನಗರದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾದ ರೋಗಿಯಲ್ಲಿ ಲಕ್ಷಣ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವಾಲಯ ದೃಢಪಡಿಸಿದೆ.

ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 31 ವರ್ಷದ ವ್ಯಕ್ತಿ ಜ್ವರ ಮತ್ತು ಚರ್ಮದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ರೋಗ ಲಕ್ಷಣದ ಆಧಾರದಲ್ಲಿ ಈದೀಗ ಆತನಲ್ಲಿ ಮಂಕಿಪಾಕ್ಸ್ ಸೋಂಕು ಇರುವುದು ದೃಢಪಟ್ಟಿದೆ.

ಇದರೊಂದಿಗೆ ದೇಶದಲ್ಲಿ 4ನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ ಈ ಹಿಂದೆ 3 ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿತ್ತು. ಇದೀಗ ದೆಹಲಿಯಲ್ಲಿ 4 ನೇ ಪ್ರಕರಣ ವರಿದಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.