Titanic ಹಡಗು ಮುಳುಗಿದ ಸ್ಥಳ ಅಟ್ಲಾಂಟಿಕ್ ಸಾಗರರಿಂದ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ. ಟೈಟಾನಿಕ್ ಹಡಗಿನ ಅವಶೇಷಗಳಿರುವ ಕಡೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ. ಟೈಟಾನಿಕ್ ಸಬ್ಮೆರಿನ್ ಕಣ್ಮರೆಯಾಗಿರುವುದನ್ನು ಸ್ಕೈ ನ್ಯೂಸ್ ದೃಢಪಡಿಸಿದೆ. ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ದೃಢಪಟ್ಟಿಲ್ಲ.
ಏಪ್ರಿಲ್ 14, 1912 ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ಮಂಜುಗಡ್ಡೆಗೆ (ಐಸ್ ರಾಕ್) ಡಿಕ್ಕಿ ಹೊಡೆದ ನಂತರ ಟೈಟಾನಿಕ್ ಹಡಗು ಎರಡು ತುಂಡಾಗಿ ಸಮುದ್ರದಲ್ಲಿ ಮುಳುಗಿತ್ತು. ಆ ಸಮಯದಲ್ಲಿ, ಟೈಟಾನಿಕ್ ಮುಳುಗುವಿಕೆಯಿಂದ 1500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಏಪ್ರಿಲ್ 10 ರಂದು, ಈ ಹಡಗು ಬ್ರಿಟನ್‌ನ ಸೌತಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿತ್ತು, ಅದು ಅಪಘಾತಕ್ಕೆ ಬಲಿಯಾಯಿತು.
ಹಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಕೂಡ ಟೈಟಾನಿಕ್ ಹಡಗು ದುರಂತದ ಬಗ್ಗೆ ಅದೇ ಹೆಸರಿನಲ್ಲಿ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಟೈಟಾನಿಕ್ ಅಪಘಾತವನ್ನು ಬಹಳ ಹತ್ತಿರದಿಂದ ತೋರಿಸಲಾಗಿದೆ. ಈ ಚಿತ್ರ ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಯಿತು.
ನೌಕೆಯಲ್ಲಿದ್ದವರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆದರೆ ಎಷ್ಟು ಮಂದಿ ಇದ್ದರು ಎನ್ನುವ ಕುರಿತು ನಿಖರವಾದ ಮಾಹಿತಿ ಇಲ್ಲ ಎಂದು ಓಸಿಂಗೇಟ್ ಕಂಪನಿ ಹೇಳಿದೆ.
ಸಮುದ್ರಯಾನವು ನ್ಯೂಫೌಂಡ್ಲ್ಯಾಂಡ್ನ ಸೇಂಟ್ ಜಾನ್ಸ್ನಲ್ಲಿ ಪ್ರಾರಂಭವಾಗುತ್ತದೆ. ಅಟ್ಲಾಂಟಿಕ್ನಾದ್ಯಂತ ಸುಮಾರು 400 ಮೈಲಿಗಳಷ್ಟು ಸಂಚರಿಸುತ್ತದೆ. ಐವರು ಮಾತ್ರ ಈ ನೌಕೆಯನ್ನು ಒಂದೇ ಸಮಯದಲ್ಲಿ ಹತ್ತಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.