ರೂಲ್ಸ್ ನೆಪದಲ್ಲಿ ಎಗ್‍ರೈಸ್ ಬಂಡಿ ವ್ಯಾಪಾರಿಗಳಿಂದ ಪೊಲೀಸರು ಲಂಚ!

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದಲ್ಲಿ ಕೊಲೆ, ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪೊಲೀಸರು, ಬಡ ಬೀದಿಬದಿಯ ವ್ಯಾಪಾರಿಗಳ ಮೇಲೆ ದರ್ಪ ತೋರುತ್ತಿದ್ದಾರೆ.

ದುಡಿದು ತಿನ್ನುತ್ತಿರುವವರ ಮೇಲೆ ದರ್ಪತೋರಿ ಕಿತ್ತು ತಿನ್ನುತ್ತಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಜನರು ಹಿಡಿಶಾಪ ಹಾಕುವಂತಾಗಿದೆ. ಹುಬ್ಬಳ್ಳಿ ವಿದ್ಯಾನಗರ ಪೊಲೀಸರ ಲಂಚಾವತಾರಕ್ಕೆ ಬೀದಿ ಬದಿಯಲ್ಲಿನ ವ್ಯಾಪಾರಿಗಳು ಬೇಸತ್ತಿದ್ದಾರೆ. ರಾತ್ರಿ 10 ಗಂಟೆಗೆ ಸರಿಯಾಗಿ ಬಂದ್ ಆಗಬೇಕಂತೆ ಎಗ್‍ರೈಸ್ ಬಂಡಿಗಳು. ಇಲ್ಲದಿದ್ದರೆ ಬಿಳುತ್ತೆ ಸಾವಿರಾರ ರೂಪಾಯಿ ದಂಡ.

ರೂಲ್ಸ್ ನೆಪದಲ್ಲಿ ಬಡ ವ್ಯಾಪಾರಿಗಳಿಂದ ಪೊಲೀಸರು ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಬಡವರ ಮೇಲೆ ಅಷ್ಟೇ ಇವರ ದೌರ್ಜನ್ಯ ಆದರೆ ದೊಡ್ಡ ದೊಡ್ಡ ಹೊಟೇಲ್ ಗಳು ತಡರಾತ್ರಿ 12 ಗಂಟೆಯ ತನಕವೂ ಓಪನ್ ಇದ್ದರೆ ಡೋಂಟ್ ಕೇರ್ ಎನ್ನುತಾರೆ ಅಂತ ವ್ಯಾಪಾರಿಗಳು ತಮ್ಮ ನೋವು ಹೊರಹಾಕುತ್ತಿದ್ದಾರೆ.