ದಾಂಡೇಲಿ :: ನಗರದ ಸಮೀಪವಿರುವ ಹಾಲಮಡ್ಡಿಯಲ್ಲಿ ಬಹು ನಿರೀಕ್ಷಿತ ಯುಜಿಡಿ ಸಂಸ್ಕರಣಾ ಘಟಕ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.
ದಾಂಡೇಲಿ ನಗರದಲ್ಲಿರುವ ಎಲ್ಲಾ ಮನೆಗಳಿಂದ ಯುಜಿಡಿ ಪೈಪ್ ಲೈನ್ ಮೂಲಕ ಬರುವ ತ್ಯಾಜ್ಯ ಹಾಲಮಡ್ಡಿಯಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಸಂಸ್ಕರಣಾ ಘಟಕಕ್ಕೆ ಬಂದು ತಲುಪಲಿದೆ. ಬಳಿಕ ಇಲ್ಲಿ ಸಂಸ್ಕರಣೆಗೆ ಒಳಪಡುತ್ತದೆ. ಇಲ್ಲಿ ಬಂದು ಜಮಾವಣೆಗೊಂಡ ತ್ಯಾಜ್ಯವನ್ನು ಸಂಸ್ಕರಣೆಗೆ ಒಳಪಡಿಸಿದ ಬಳಿಕ ತ್ಯಾಜ್ಯ ನೀರನ್ನು ಪ್ರತ್ಯೇಕವಾಗಿಸಿ, ಉಳಿದ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯಲಿದೆ…
ಒಟ್ಟಿನಲ್ಲಿ ಬಹು ನಿರೀಕ್ಷಿತ ಯುಜಿಡಿ ಕಾಮಗಾರಿಯ ಸಂಸ್ಕರಣಾ ಘಟಕ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡು ಬಳಕೆಗೆ ಕಾಯುತ್ತಿದೆ.
ಸಂದೇಶ್ ಜೈನ್, ನುಡಿ ಸಿರಿ ನ್ಯೂಸ್, ದಾಂಡೇಲಿ