ಕೈ ಕೊಟ್ಟ ಮುಂಗಾರು; ಹುಬ್ಬಳ್ಳಿಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ

ಹುಬ್ಬಳ್ಳಿ: ತಾಪಮಾನ ಏರಿಕೆ, ಮಳೆಯಿಂದಾಗಿ ತರಕಾರಿ ಮತ್ತು ಸೊಪ್ಪುಗಳ ದರ ಗಗನಕ್ಕೇರಿವೆ. ಮುಂಗಾರು ಮಳೆ ಕೈಕೊಟ್ಟಿದ್ದು ಬಿತ್ತನೆ ಇಲ್ಲದೆ ತರಕಾರಿ ಡಿಮ್ಯಾಂಡ್ ಹೆಚ್ಚಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಡಬಲ್ ಆಗಿದೆ. ಮಳೆಯಾಗದ ಹಿನ್ನಲೆ ರೈತರು ತರಕಾರಿ ಬೆಳೆಯೋದು ಕಡಿಮೆಯಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಿದೆ. ಹುಬ್ಬಳ್ಳಿಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.

ತರಕಾರಿಇಂದಿನ ದರಹಿಂದಿನ ದರ ಬದನೆಕಾಯಿ80 Rs,30Rs, ಟೊಮೆಟೊ50Rs,30Rs,ಬೀನ್ಸ್120Rs,50Rs,ಮೆಣಸಿನಕಾಯಿ100Rs,30Rs, ಸೋತಿಕಾಯಿ80Rs, 30Rs,ಹೀರಿಕಾಯಿ80Rs, 30Rs,ಕ್ಯಾಬೀಜ್30Rs,10Rs,ಹೂಕೋಸು40Rs,10Rs,ಚವಳಿಕಾಯಿ80Rs,20Rs,ಕೋತಂಬರಿ20Rs,5Rs, ಮೂಲಂಗಿ20Rs,10Rs,ಮೆಂತೆಪಲ್ಲೆ25 ರೂಗೆ ಒಂದು10 ರೂಗೆ ಒಂದುಗಜ್ಜರಿ80Rs, 30Rs,ಬೀಟ್ರೂಟ್60Rs,20Rs,ಆಲೂಗಡ್ಡೆ30Rs,15Rs,ಬೆಂಡೆಕಾಯಿ80Rs,40Rs,ಕ್ಯಾಪ್ಸಿಕಾಮ್120Rs, 50Rs,ಹಾಗಲಕಾಯಿ80Rs,30Rs,

ಮುಂಗಾರು ಕೈ ಕೊಟ್ಟ ಹಿನ್ನಲೆ ತರಕಾರಿ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು‌ ತಿಳಿಸಿದ್ದಾರೆ. ಮಾರುಕಟ್ಟೆಗೆ ತರಕಾರಿ ಬರ್ತಿಲ್ಲ. ಹೊರಗಿನ ರಾಜ್ಯದಿಂದ ಬರ್ತಿದೆ. ಹೀಗಾಗಿ ತರಕಾರಿ ಬೆಲೆ ದುಪ್ಟಟ್ಟಾಗಿದೆ. ತರಕಾರಿ ಖರೀದಿಗೆ ಗ್ರಾಹಕರು ಬಂದರೂ ಎರಡು ಕೆಜಿ ಖರೀದಿ ಮಾಡೋರು ಅರ್ಧ ಕೆಜಿ ಖರೀದಿ ಮಾಡ್ತೀದ್ದಾರೆ. ಮಳೆಯಾಗಿದ್ರೆ ಸ್ಥಳೀಯ ರೈತರು ತರಕಾರಿ ಬೆಳಿತಿದ್ರು. ಇದೀಗ ಮಳೆಯಾಗಿಲ್ಲ ತರಕಾರಿ ಬೆಳದಿಲ್ಲ. ಹೀಗಾಗಿ ಬೆಲೆ ದುಪ್ಪಟ್ಟಾಗಿದೆ ಎಂದು ತರಾಕರಿ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.