ಇತ್ತೀಚೆಗೆ ಸ್ಟಾರ್ ಹೀರೋ-ಹೀರೋಯಿನ್ಗಳ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಫೋಟೋ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಮೇಲಿರುವ ಫೋಟೋದಲ್ಲಿ ಇರುವ ಈ ಬಾಲಕ ಈಗ ಸೌತ್ ಇಂಡಸ್ಟ್ರಿಯ ಸ್ಟಾರ್ ಹೀರೋ. ತಮಿಳು ಸಿನಿಮಾಗಳಲ್ಲಿ ನಟಿಸಿದರೂ ದೇಶ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹೀರೋನ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಾಯಕನಾಗಿ ಮುಂದುವರಿದಿದ್ದಾರೆ. 48ರ ಹರೆಯದಲ್ಲೂ 27ರ ಹರೆಯದ ಯುವಕನಾಗಿ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರು ಬೇರಾರು ಅಲ್ಲ ದಳಪತಿ ವಿಜಯ್. ಕಾಲಿವುಡ್ನಲ್ಲಿ ಟಾಪ್ ಹೀರೋ. ಅವರ ಬಾಲ್ಯದ ಫೋಟೋ ವೈರಲ್ ಆಗಿದೆ.
ವಿಜಯ್ ಜೂನ್ 22, 1974ರಂದು ಜನಿಸಿದರು. ಇನ್ನು ಕೆಲವೇ ದಿನಗಳಲ್ಲಿ ಅವರು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ವಿಜಯ್ ತಂದೆ ಎಸ್.ಎ. ಚಂದ್ರಶೇಖರ್, ತಾಯಿ ಶೋಭಾ. ಇಬ್ಬರಿಗೂ ಚಿತ್ರರಂಗದ ಹಿನ್ನೆಲೆ ಇದೆ. 90ರ ದಶಕದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿ ವಿಜಯ್ ಗಮನ ಸೆಳೆದರು. ಈಗ ಅವರ ಬಾಲ್ಯದ ಫೋಟೋ ವೈರಲ್ ಆಗಿವೆ.
ತಮಿಳಿನಲ್ಲಿ ವಿಜಯ್ ಅಭಿನಯದ ಚಿತ್ರಗಳು ತೆಲುಗಿನಲ್ಲೂ ಡಬ್ ಆಗಿ ಸೂಪರ್ ಹಿಟ್ ಆದವು. ತೆಲುಗಿನಲ್ಲೂ ಅವರಿಗೆ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಇದೆ. ಕರ್ನಾಟಕದಲ್ಲೂ ವಿಜಯ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ವಾರಿಸು’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ‘ಲಿಯೋ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ನಿರ್ದೇಶಕ ಲೊಕೇಶ್ ಕನಗರಾಜ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸುಮಾರು 17 ವರ್ಷಗಳ ನಂತರ ತ್ರಿಷಾ ಮತ್ತು ವಿಜಯ್ ಈ ಚಿತ್ರಕ್ಕಾಗಿ ಜೊತೆಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.