ಅಂಕೋಲಾ : ಅಂಕೋಲಾ ಠಾಣೆಯ ನೂತನ ಪಿಎಸೈ ಆಗಿ ಉದ್ದಪ್ಪ ಅಶೋಕ ಧರೆಪ್ಪನವರ ಹಾಗೂ ಜಯಶ್ರೀ ಪ್ರಭಾಕರ ಅಧಿಕಾರ ವಹಿಸಿಮಾಡಿದ್ದಾರೆ
ಈ ಹಿಂದೆ ಅಂಕೋಲಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸೈಗಳಾದ ಪ್ರವೀಣಕುಮಾರ್, ಪ್ರೇಮನಗೌಡ ಪಾಟೀಲ್, ಮಹಾಂತೇಶ ವಾಲ್ಮೀಕಿ ಬೇರೆಡೆ ವರ್ಗಾವಣೆಗೊಂಡಿದ್ದಾರೆ.
ಉದ್ದಪ್ಪ ಧರೆಪ್ಪನವರ ಹಾಗೂ ಜಯಶ್ರೀ ಪ್ರಭಾಕರ 2020 ರ ಬ್ಯಾಚ್ ನ ಅಧಿಕಾರಿಗಳಾಗಿದ್ದಾರೆ. ಉದ್ದಪ್ಪ ಧರೆಪ್ಪನವರ ಮೂಲತ ಬೆಳಗಾವಿ ಜಿಲ್ಲೆಯವರು. ಚಿತ್ತಾಕುಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಈಗ ಅಂಕೋಲಾ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಹಾಗೂ ಜಯಶ್ರೀ ಪ್ರಭಾಕರ ಮೂಲತ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯವರು. ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.
ಹಿಂದಿನ ಪಿಎಸೈ ಪ್ರೇಮನಗೌಡ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿದ್ದು ಅಂಕೋಲಾ ತಾಲ್ಲೂಕಿನ ಮನೆ ಮಾತಾಗಿದ್ದರು. ಖಡಕ್ ಅಧಿಕಾರಿಯಾಗಿ ಜನ ಮೆಚ್ಚುಗೆ ಗಳಿಸಿದ್ದರು. ಜನ ಸಾಮಾನ್ಯರ ಪಿಎಸೈ ಎಂದು ಹೆಸರಾಗಿರುವ ಅವರು ಅಕ್ರಮ ದಂಧೆಕೋರರಿಗೆ ಸಿಂಹ ಸ್ವಪ್ನವಾಗಿದ್ದರು. ಸಿಬ್ಬಂದಿಗಳ ಪಾಲಿನ ಹೀರೋ ಆಗಿದ್ದರು.
ಇತ್ತೀಚಿಗೆ ಚುನಾವಣೆಯ ನಂತರ ಅಂಕೋಲಾ ತಾಲ್ಲೂಕಿನಲ್ಲಿ ಅಕ್ರಮ ಮದ್ಯೆ ಮಾರಾಟ ಮತ್ತು ಮಟ್ಕಾ ವ್ಯವಹಾರಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅವುಗಳಿಗೆ ಕಡಿವಾಣ ಹಾಕುವ ಜವಾಬ್ದಾರಿ ಹೊಸ ಅಧಿಕಾರಿಗಳ ಮೇಲಿದೆ.