ಈ ದೇವಾಲಯದಲ್ಲಿ ಶಿವಲಿಂಗ ದಿನಕ್ಕೆ ಮೂರು ಬಾರಿ ರೂಪ ಬದಲಾಯಿಸುತ್ತದೆ. ಸ್ವತಃ ಬ್ರಹ್ಮನೇ ನಿರ್ಮಿಸಿದ್ದಾನೆ ಎನ್ನಲಾಗುವ ಈ ದೇವಾಲಯ ಎಲ್ಲಿದೆ ಗೊತ್ತಾ? ಇದರ ವೈಶಿಷ್ಠ್ಯಗಳು ಹಲವಿವೆ..
ಉತ್ತರ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಕೊರತೆ ಇಲ್ಲ, ಶ್ರೀ ರಾಮ ನಗರ ಅಯೋಧ್ಯೆ, ಕಾಶಿ, ದ್ವಾರಕೆ, ಮಥುರಾ ಇತ್ಯಾದಿ ಜನಪ್ರಿಯ ದೇವಾಲಯಗಳು ಇವೆ. ಉತ್ತರ ಪ್ರದೇಶದ ಈ ಅನೇಕ ಧಾರ್ಮಿಕ ಸ್ಥಳಗಳು ತಮ್ಮ ರಾಮಾಯಣ, ಮಹಾಭಾರತ ಉಲ್ಲೇಖದಿಂದಾಗಿ ದೇಶದಾದ್ಯಂತ ಜನಪ್ರಿಯವಾಗಿವೆ. ಆದರೆ ಇಲ್ಲಿ ಇನ್ನೂ ಕೆಲವು ಧಾರ್ಮಿಕ ಸ್ಥಳಗಳಿವೆ, ಅವುಗಳು ತಮ್ಮ ಪವಾಡಗಳಿಗೆ ಮತ್ತು ಪುರಾಣಗಳಿಗೆ ಹೆಸರುವಾಸಿಯಾಗಿವೆ. ಇದರಲ್ಲಿ ಸೀತಾಪುರದಲ್ಲಿರುವ ನೈಮಿಶಾರಣ್ಯ ಭೂತೇಶ್ವರನಾಥ ದೇವಾಲಯವೂ ಒಂದು. ಈ ದೇವಾಲಯವು ಹಲವು ರೀತಿಯಲ್ಲಿ ವಿಶೇಷವಾಗಿದೆ.
ಮೂರು ಬಾರಿ ರೂಪ ಬಗದಲಿಸುವ ಲಿಂಗ
ಭೂತೇಶ್ವರ ನಾಥ ದೇವಾಲಯದಲ್ಲಿ ಸ್ಥಾಪಿಸಲಾದ ಅದ್ಭುತ ಶಿವಲಿಂಗವು ಪ್ರತಿದಿನ 3 ಬಾರಿ ತನ್ನ ರೂಪವನ್ನು ಬದಲಾಯಿಸುತ್ತದೆ. ಮುಂಜಾನೆ ಶಿವಲಿಂಗವು ಬಾಲಕಲ್ಯ ರೂಪದಲ್ಲಿ ಗೋಚರಿಸುತ್ತದೆ. ನೀವು ಮಧ್ಯಾಹ್ನದ ಸಮಯದಲ್ಲಿ ಶಿವನ ಉಗ್ರ ರೂಪ ಮತ್ತು ಸಂಜೆ ಶಿವಲಿಂಗದ ಕರುಣಾಮಯ ರೂಪವನ್ನು ನೋಡಬಹುದು.
ನೈಮಿಶಾರಣ್ಯ ಭೂತೇಶ್ವರನಾಥ ದೇವಾಲಯ
ಈ ದೇವಾಲಯದಲ್ಲಿ ಸ್ಥಾಪಿಸಲಾದ ಶಿವಲಿಂಗಕ್ಕೆ ನೀರನ್ನು ಅರ್ಪಿಸಲು ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಾರೆ. ಶ್ರಾವಣ ಮಾಸದಲ್ಲಂತೂ ಭಕ್ತರ ಸಂಖ್ಯೆ ಅಪಾರವಾಗಿರುತ್ತದೆ.