ಇನ್ನು ಮುಂದೆ ಮಹದೇವಪ್ಪನೂ “CONVERT”, ಕಾಕಪಾಟಿಲನೂ “CONVERT”; ಸಿದ್ಧು ವಿರುದ್ಧ ಯತ್ನಾಳ್​​ ಕಿಡಿ

ರೋಧಿ ಕಾನೂನನ್ನು ರದ್ದುಗೊಳಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಬಲವಂತ, ಅನಗತ್ಯ ಪ್ರಭಾವ ಅಥವಾ ಯಾವುದೇ ಮೋಸದ ವಿಧಾನ, ತಪ್ಪಾಗಿ ನಿರೂಪಿಸುವ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಕಾನೂನು ನಿಷೇಧಿಸುತ್ತದೆ. ರಾಜ್ಯ ಸಚಿವ ಸಂಪುಟವು ಪ್ರಸ್ತಾವನೆಯನ್ನು ಅಂಗೀಕರಿಸಿದ್ದು, ಶೀಘ್ರದಲ್ಲೇ ಸದನಕ್ಕೆ ತರುವ ಸಾಧ್ಯತೆಯಿದೆ.

ಸಮಾಜದಲ್ಲಿ ಶಾಂತಿ ನೆಲೆಸೋದು ಕಾಂಗ್ರೆಸ್ ಗೆ ಬೇಕಿಲ್ಲ. ಸಮಾಜದಲ್ಲಿ ಅಶಾಂತಿ, ಗಲಭೆ, ಗೊಂದಲ ಇರಬೇಕು ಅಂತ ಕಾಂಗ್ರೆಸ್ ಬಯಸಿದೆ ಎಂದು ಮಾಜಿ ಸಚಿವ ಅಶ್ವಥ್​ ನಾರಾಯಣ್​ ವಾಗ್ದಾಳಿ ನಡೆಸಿದ್ದಾರೆ.

ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್​ ಸರ್ಕಾರ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್​ ಅವರು, ಸಿದ್ದರಾಮಯ್ಯನವರ ಮತಾಂತರ ಭಾಗ್ಯ ಆಮಿಷದ ಮತಾಂತರಕ್ಕೆ ಬೆಂಬಲ ನೀಡಲು ಸಿದ್ದರಾಮಯ್ಯನವರು ಸಜ್ಜಾಗಿದ್ದಾರೆ ಎಂದು ಆರೋಪಿಸಿದ್ದಾರೆ.