ನಿಗದಿತ ಸಮಯಕ್ಕಿಂತ ತಡವಾಗಿ ಫುಡ್ ಡೆಲಿವರಿಯಾದಾಗ ಗ್ರಾಹಕರು ಅನುಮಾನದಿಂದ ಸ್ವಿಗ್ಗಿನನ್ನು ಡೆಲಿವರಿ ಏಜೆಂಟ್ ವಿಚಾರಿಸಿದ್ದಾರೆ. ಆಗ ಆತ, ಕ್ಷಮಿಸಬೇಕು, ತನ್ನ ಬಳಿ ಓಡಾಟಕ್ಕೆ ದ್ವಿಚಕ್ರವಾಹನ ಇಲ್ಲವೆಂದೂ ಮತ್ತು ತಾನು ಈ ಡೆಲಿವರಿಗಾಗಿ 3 ಕಿ.ಮೀ ನಡೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಆಗ ಗ್ರಾಹಕರು ಅವನ ಬಗ್ಗೆ ಕಾಳಜಿವಹಿಸಿ ಅವನ ಪೂರ್ವಾಪರದ ಬಗ್ಗೆ ಕೇಳಿದ್ಧಾರೆ. ಅಷ್ಟೇ ಅಲ್ಲ ಹೊಸ ಉದ್ಯೋಗವನ್ನು ಪಡೆಯುವಲ್ಲಿ ಸಹಾಯವನ್ನೂ ಮಾಡಿದ್ದಾರೆ.
ಫ್ಲ್ಯಾಶ್ ಎಂಬ ಟೆಕ್ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಿಯಾಂಶಿ ಚಂದೇಲ್, ಸ್ವಿಗ್ಗಿ ಮೂಲಕ ಐಸ್ಕ್ರೀಮ್ ಆರ್ಡರ್ ಮಾಡಿದ್ದಾರೆ. ಆಗ ಡೆಲಿವರಿ ಏಜೆಂಟ್ ಸಾಹಿಲ್ ಸಿಂಗ್ ಬಹಳ ತಡವಾಗಿಯೇ ಅದನ್ನು ತಲುಪಿಸಿದಾಗ ಕಾರಣವನ್ನು ಕೇಳಿದ್ದಾರೆ. ತನ್ನ ಫ್ಲ್ಯಾಟ್ಮೇಟ್ನಿಂದಾಗಿ ನಾನು ಸಾಲಕ್ಕೆ ಬಿದ್ದು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಹಾಗಾಗಿ ನಾನೀಗ ನಡೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿದ್ದೇನೆ ಎಂದಿದ್ದಾನೆ. ಅವನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಆಕೆ, ಅವನಿಗೆ ಹೊಸ ಕೆಲಸ ಕೊಡಿಸುವ ಬಗ್ಗೆ ಆಲೋಚಿಸಿದ್ಧಾರೆ.