ಬೀದರ್(ಜೂ.15): ಇಲ್ಲಿನ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಆದರ್ಶ ರಾಜ್‌ಕುಮಾರ್ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಕಲಬುರಗಿ ವಿಭಾಗಕ್ಕೆ ಟಾಪರ್‌ಆಗಿ ಹೊರ ಹೊಮ್ಮಿದ್ದಾರೆ. 720 ಅಂಕಗಳ ಪೈಕಿ 696 ಅಂಕ ಪಡೆದಿರುವ ಆದರ್ಶ, ಅಖಿಲ ಭಾರತ ಮಟ್ಟದಲ್ಲಿ 368ನೇ ರ‍್ಯಾಂಕ್ ಗಳಿಸಿದ್ದಾರೆ.
ಈ ಬಾರಿಯ ನೀಟ್‌ನಲ್ಲಿ ಶಾಹೀನ್ ವಿದ್ಯಾರ್ಥಿ ಆದರ್ಶ ರಾಜಕುಮಾರ್ ಕಲಬುರಗಿ ವಿಭಾಗಕ್ಕೆ ಮೊದಲಿಗರಾಗಿ ಗಮನ ಸೆಳೆದಿದ್ದಾರೆ. ಶಾಹೀನ್ ಕಾಲೇಜಿನ 35 ವಿದ್ಯಾರ್ಥಿಗಳು 650ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. 100 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಬೀದರ್‌ನ ಮುಖ್ಯ ಶಾಖೆ, ದೆಹಲಿ, ಮುಂಬೈ, ನಾಂದೇಡ್, ಔರಂಗಾಬಾದ್, ಮಾಳೆಗಾಂವ್, ಭೂಪಾಲ್, ಹುಬ್ಬಳ್ಳಿ, ಕಲಬುರಗಿ ಮೊದಲಾದ ಶಾಖೆಗಳಿಗೆ ಅತ್ಯುತ್ತಮ ಫಲಿತಾಂಶ ದೊರೆತಿದೆ.
ಶಾಹೀನ್ ಕಾಲೇಜಿನ ಶೀಮಾ ಫಿರದೋಸ್ 567ನೇ ರ‍್ಯಾಂಕ್(695 ಅಂಕ), ಆದಿತ್ಯ ನಾಮದೇವ ನಿಟ್ಟೂರೆ 942ನೇ ರ‍್ಯಾಂಕ್(687 ಅಂಕ), ಮಹಮ್ಮದ್‌ಓವೈಸ್1,193ನೇ ರ‍್ಯಾಂಕ್(685 ಅಂಕ), ಜಾಹೀದ್‌ಅಕ್ಮಲ್1,195ನೇ ರ‍್ಯಾಂಕ್(685 ಅಂಕ), ಅಭಿಷೇಕ್1,284ನೇ ರ‍್ಯಾಂಕ್(685 ಅಂಕ) ಗಳಿಸಿ ಸಾಧನೆ ಮಾಡಿದ್ದಾರೆ ಎಂದು ಶಾಹೀನ್ ಆಡಳಿತ ಮಂಡಳಿ ತಿಳಿಸಿದೆ.