ಉತ್ತರ ಕನ್ನಡ: ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಚಂಡಮಾರುತದ ಆರ್ಭಟ ಹೆಚ್ಚಾಗಿದ್ದು, ಜಿಲ್ಲೆಯ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿಗಿದೆ. ಪರಿಣಾಮ ಮೀನುಗಾರಿಕೆ ಯಾಂತ್ರಿಕ ಬೋಟ್ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿರುವಂತಹ ಘಟನೆ ಅಂಕೋಲ ತಾಲೂಕಿನ ತರಂಗಮೇಟ್ ಕಡಲತೀರದಲ್ಲಿ ನಡೆದಿದೆ. ವಿಶ್ವ ಹರಿಕಾಂತ ಎಂಬುವರಿಗೆ ಈ ಯಾಂತ್ರಿಕ ಬೋಟ್ ಸೇರಿದ್ದು, ಇಂಜಿನ್, ಮೀನಿನ ಬಲೆ ಸೇರಿ 2.5 ಲಕ್ಷ ಮೌಲ್ಯ ಹಾನಿ ಆಗಿದ್ದು, ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮೀನುಗಾರರು ಆಗ್ರಹಿಸಿದ್ದಾರೆ.
ಇದೇ ಬಿಪರ್ ಜಾಯ್ ಚಂಡಮಾರುತದ ಅಲೆಗಳ ಅಬ್ಬರಕ್ಕೆ ತರಂಗಮೇಟ್ ಕಡಲತೀರದಲ್ಲಿ ಬಾರಿ ಕಡಲ ಕೊರೆತ ಉಂಟಾಗಿದೆ. ಪರಿಣಾಮ ಅಲೆಗಳ ಹೊಡೆತಕ್ಕೆ 20 ಕ್ಕೂ ಹೆಚ್ಚು ತೆಂಗಿನ ಮರಗಳು ಕೊಚ್ಚಿ ಹೋಗಿವೆ. ತರಂಗಮೇಟ್ ಕಡಲ ತೀರದಲ್ಲಿ ಪ್ರತಿವರ್ಷ 50 ಮೀಟರ್ ಕಡಲ ಕೊರೆತ ಉಂಟಾಗಿದೆ. ಕಡಲ ಕೊರೆತವಾದರು ತಡಗೋಡೆ ನಿರ್ಮಾಣ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ ತೋರಿದೆ.
ಅಬ್ಬರಿಸುವ ಅಲೆಗಳನ್ನು ಕಂಡು ತರಂಗಮೇಟ್ ಕಡಲತೀರದಲ್ಲಿ ನೂರಾರು ಮೀನುಗಾರರ ಮನೆಗಳಿದ್ದು, ಆತಂಕಗೊಂಡಿದ್ದಾರೆ. ಸೈಕ್ಲೋನ್ ಎಪೆಕ್ಟ್ನಿಂದ ಪಾತಿ ದೋಣಿಗಳಿಗೂ ಹಾನಿ ಆಗಿದೆ.