ಬೆಂಗಳೂರು (ಜೂ.14): ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕ ಬಸ್‌ಪಾಸ್‌ನ ಜೆರಾಕ್ಸ್ ತೋರಿಸಿದ್ದಾನೆ. ಆದರೆ, ಕಂಡಕ್ಟರ್ ಮೂಲ ಪ್ರತಿ ತೋರಿಸುವಂತೆ ಹೇಳಿದ್ದಕ್ಕೆ, ಯುವಕ ನಿರ್ವಾಹಕನ ಮೇಲೆಯೇ ಹಲ್ಲೆ ಮಾಡಿದ್ದಾನೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಆಧಾರ್‌ಕಾರ್ಡ್, ಓಟಿನ ಕಾರ್ಡ್ ಜೆರಾಕ್ಸ್ ತೋರ್ಸಿದ್ರೂ ಸುಮ್ಮನಿರ್ತೀಯಾ ನನ್ಮೇಲೆ ಮಾತ್ರ ರೇಗಾಡ್ತಿಯಾ ಎಂದು ಗುದ್ದಿದ್ದಾನೆ. ಹಲ್ಲೆ ಮಾಡಿದ್ದಕ್ಕೆ ಪೊಲೀಸ್ ಠಾಣೆಗೆ ಕರೆದೊಯ್ದರೆ ಅಲ್ಲಿಯೂ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮೊದಲ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆ ಜಾರಿಗೊಂಡ ನಂತರ ಮಹಿಳೆಯರು ಸರ್ಕಾರ ನೀಡಿರುವ ಯಾವುದಾದರೂ ಮೂಲ ದಾಖಲಾತಿ ಅಥವಾ ಜೆರಾಕ್ಸ್ ಪ್ರತಿ ನೋಡಿದರೂ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ಇಲ್ಲೊಬ್ಬ ಯುವಕ ಸಾರಿಗೆ ಇಲಾಖೆ ನೀಡಿದ್ದ ಬಸ್‌ಪಾಸ್‌ನ ಜೆರಾಕ್ಸ್ ಪ್ರತಿ ತೋರಿಸಿದ್ದಾನೆ. ಆದರೆ, ಸರ್ಕಾರದ ನಿಯಮದಂತೆ ಮೂಲ ಪ್ರತಿಯನ್ನು ತೋರಿಸಲು ಮಾತ್ರ ಅವಕಾಶವಿದೆ. ಯುವಕನಿಗೆ ಬಸ್‌ಪಾಸ್‌ನ ಮೂಲ ಪ್ರತಿ ತೋರಿಸುವಂತೆ ತಾಕೀತು ಮಾಡಿದ್ದಾರೆ. ಆಗ ಯುವಕ ಶಕ್ತಿ ಯೋಜನೆಯಡಿ ಮಹಿಳೆಯರಿ ಆಧಾರ್‌ಕಾರ್ಡ್, ಓಟಿನ ಕಾರ್ಡ್ ಜೆರಾಕ್ಸ್ ತೋರ್ಸಿದ್ರೂ ಸುಮ್ಮನಿರ್ತೀಯಾ ನನ್ಮೇಲೆ ಮಾತ್ರ ರೇಗಾಡ್ತಿಯಾ ಎಂದು ಕಂಡಕ್ಟರ್ ಮೇಲೆಯೇ ಹಲ್ಲೆ ಮಾಡಿದ್ದಾನೆ.