ಕುಡಚಿ ರೈಲು ಮಾರ್ಗಕ್ಕಾಗಿ ಭೂಸ್ವಾಧೀನ: ಪರಿಹಾರ ನೀಡದಿದ್ದಕ್ಕೆ ಎಸಿ ಕಚೇರಿಯ ಪಿಠೋಪಕರಣ ಜಪ್ತಿಗೆ ಕೋರ್ಟ್ ಆದೇಶ

ಬಾಗಲಕೋಟೆ: ಕುಡಚಿ ರೈಲು ಮಾರ್ಗಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು ಪರಿಹಾರ ನೀಡದ ವಿಚಾರಕ್ಕೆ ಸಂಬಂಧಿಸಿ ಎಸಿ ಕಚೇರಿಯ ಪಿಠೋಪಕರಣಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ನೀಡಿದೆ. 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಿಂದ ಆದೇಶ ಹೊರಡಿಸಲಾಗಿದೆ.

ಯಲ್ಲಪ್ಪ ಚೊಳಚಗುಡ್ಡ ಅವರಿಗೆ ಸೇರಿದ 3 ಎಕರೆ 8 ಗುಂಟೆ ಜಮೀನನ್ನು ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕಾಗಿ ಕಂದಾಯ ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಕೋರ್ಟ್ ಆದೇಶ ಇದ್ರೂ, ಮೂರು ತಿಂಗಳಿಂದ ಪರಿಹಾರ ನೀಡದ ವಿಚಾರ‌ಕ್ಕೆ ಸಂಬಂಧಿಸಿ ಬಾಗಲಕೋಟೆ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಎಸಿ ಕಚೇರಿ ಜಪ್ತಿಗೆ ಆದೇಶ ಹೊರಡಿಸಿದ್ದಾರೆ. ಭೂ ಮಾಲೀಕ ಯಲ್ಲಪ್ಪ ಚೊಳಚಗುಡ್ಡ ಅವರಿಗೆ 14 ಕೋಟಿ 23 ಲಕ್ಷ 70 ಸಾವಿರದ 807 ರೂ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಪರಿಹಾರ ನೀಡದ ಹಿನ್ನೆಲೆ ಎಸಿ ಕಚೇರಿ ಜಪ್ತಿಗೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ಎಸಿ ಕಚೇರಿ ಜಪ್ತಿ ಮಾಡುವಂತೆ ತಿಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇಂದು ನ್ಯಾಯವಾದಿಗಳು ಕಚೇರಿ ಜಪ್ತಿ ಮಾಡಿದರು. ಹೆಚ್ಚುವರಿ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಅಧಿಕಾರಿಗಳು ಹೈ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಿದ್ದಾರೆ..