ಭಟ್ಕಳ : ಬಸ್ ಸ್ಟ್ಯಾಂಡ್ ನಿಂದ ಹನುಮಾನ ನಗರ ಮಾರ್ಗವಾಗಿ ಕರಿಕಲ್ ಗೆ ಬರುತ್ತಿದ್ದ ಬಸ್ ನ ಮಾರ್ಗ ಬದಲಾವಣೆ ಮಾಡಬೇಕು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ನ ಸಮಯ ಬದಲಾವಣೆ ಮಾಡುವಂತೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಭಟ್ಕಳ ಬಸ್ ಡಿಪೋ ಮ್ಯಾನೇಜರ್ ಗೆ ಮನವಿ ನೀಡಿದರು.
ಭಟ್ಕಳ ಬಸ್ ನಿಲ್ದಾಣದಿಂದ ಹನುಮಾನ್ ನಗರ ಮಾರ್ಗವಾಗಿ ಕರಿಕಲ್ ಗೆ ಬರುತ್ತಿದ್ದ ಬಸ್ ಅದೇ ಮಾರ್ಗದಿಂದ ತಲಗೇರಿ ರಸ್ತೆಯ ಮೂಲಕ ಪ್ರಥಮ ದರ್ಜೆ ಕಾಲೇಜು, ಜಾಲಿ, ರಸ್ತೆ ಮಾರ್ಗವಾಗಿ ಕಾಲೇಜು ಸಮೀಪ ಸಂಚರಿಸ ಬೇಕು ಮತ್ತು ಈ ಬಸ್ ಭಟ್ಕಳ ಬಸ್ ನಿಲ್ದಾಣದಿಂದ ಬೆಳ್ಳಿಗೆ 8.30ಕ್ಕೆ ಹೊರಡುತ್ತಿದ್ದು ಈ ಸಮಯವನ್ನು ಬದಲಾವಣೆ ಮಾಡಿ 8.45ಕ್ಕೆ ಹೊರಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ. ಅದೇ ರೀತಿ ಭಟ್ಕಳ ಬಸ್ ನಿಲ್ದಾಣದಿಂದ ಬೆಳ್ಳಿಗ್ಗೆ 9 ಗಂಟೆಗೆ ಹೊರಡುವ ಇನ್ನೊಂದು ಬಸ್ಸು ಭಟ್ಕಳ ಬಸ್ ನಿಲ್ದಾಣದಿಂದ 9.15ಕ್ಕೆ ಹೊರಡುತ್ತಿದ್ದು ಅದು ದೇವಿನಗರ 1ನೇ ಕ್ರಾಸ್ ಬಳಿ ತನಕ ಮಾತ್ರ ಬರುತ್ತಿದ್ದು. ಅಲ್ಲಿಂದ ವಿದ್ಯಾರ್ಥಿಗಳು 1 ಕಿಲೋಮೀಟರ್ ದೂರ ನಡೆದುಕೊಂಡು ಕಾಲೇಜಿಗೆ ತೆರಳುತ್ತಿದ್ದೇವೆ. ಅಷ್ಟರಲ್ಲಿ ಕಾಲೇಜಿ ತರಗತಿ ಪ್ರಾರಂಭವಾಗುತ್ತದೆ. ಇದರಿಂದಾಗಿ ನಮ್ಮ ಶಿಕ್ಷಣ ಹಾಳಾಗುತ್ತಿದೆ. ಇದೇ ಕಾರಣದಿಂದ ಕಾಲೇಜಿನ ಅರ್ಧದಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರುವುದನ್ನು ನಿಲ್ಲಸಿದ್ದಾರೆ. ಈ ವರ್ಷ ಕಾಲೇಜಗೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಗಣನೀಯ ಪ್ರಮಾಣದ ಕಡಿಮೆಯಾಗಿದೆ, ಇದಕ್ಕೆ ಕಾರಣ ಬಸ್ಸು ಸರಿಯಾದ ಸಮಯದಲ್ಲಿ ಇಲ್ಲದಿರುವುದು ಮತ್ತು ಕಾಲೇಜಿನ ತನಕ ಬಸ್ಸು ಬಾರದೇ ಇರುವುದು ನಮಗೆ ಸಮಸ್ಯೆ ಉಂಟಾಗಿದೆ.
ಕೋವಿಡ್ ಮೊದಲು ಭಟ್ಕಳ ಬಸ್ ನಿಲ್ದಾಣದಿಂದ ಹನುಮಾನ್ ನಗರ ಮಾರ್ಗವಾಗಿ ಕರಿಕಲ್ ಗೆ ಬರುತ್ತಿದ್ದ ಬಸ್ ಪುನಃ ಪ್ರಾರಂಬಿಸಿ ಅದೇ ಮಾರ್ಗವಾಗಿ ತಲಗೇರಿ ರಸ್ತೆ ಮಾರ್ಗದಿಂದ ಕಾಲೇಜಿನ ಸಮೀಪ ಬರುವಂತೆ ಮಾಡಬೇಕು, ಈ ಬಸ್ ಸಮಯವನ್ನು ಭಟ್ಕಳ ಬಸ್ ನಿಲ್ದಾಣದಿಂದ ಬೆಳ್ಳಿಗ್ಗೆ 8.45ಕ್ಕೆ ಹೊರಡುವಂತೆ ಮಾಡಬೇಕು. ಮತ್ತು ಜಾಲಿ ಮಾರ್ಗವಾಗಿ ಬರುವ ಇನ್ನೊಂದು ಬಸ್ ಕಾಲೇಜು ಸಮೀಪದವರೆಗೆ ಬರುವಂತೆ ಮಾಡಬೇಕು ಹಾಗೂ ಕಾಲೇಜು ಸಮೀಪ ಒಂದು ಸಾರ್ವಜನಿಕ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾ ವಿಥುನ್ ನಾಯ್ಕ, ಪುರಂದರ, ಮಹೇಶ, ಹಿತೇಶ, ನಾಗರಾಜ, ಬಾಲಚಂದ್ರ, ಶಾಲಿನಿ, ಸ್ವಾತಿ, ಸುಧಾ, ಲತಾ,ಉಷಾ,ರಕ್ಷಿತಾ, ಅಕ್ಷತಾ, ಸೂಚಿತ್ರಾ, ಭಾಗ್ಯಶ್ರೀ ಭಾರ್ಗವಿ ಉಪಸ್ಥಿತರಿದ್ದರು