ಕ್ಯಾನ್ಸರ್‌ ಪೀಡಿತರಿಗೆ ‘ಜಡೆ’ ನೀಡಿ ಜನ್ಮದಿನ ಆಚರಿಸಿಕೊಂಡ ಬಾಲಕಿ!

ಕೂಡ್ಲಿಗಿ (ಜೂ.11) : ಕೇಕ್‌ ಕತ್ತರಿಸಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸ್ನೇಹಿತರ ಜೊತೆ ಪಾರ್ಟಿ ಮಾಡಿ ಹುಟ್ಟು ಹಬ್ಬ ಆಚರಿಸುವುದು ಸಹಜ. ಆದರೆ ಇಲ್ಲೊಬ್ಬಳು 12 ವರ್ಷದ ಬಾಲಕಿ ಹುಟ್ಟುಹಬ್ಬದ ನಿಮಿತ್ತ ತನ್ನ ನೀಳ ಜಡೆಯನ್ನು ಕತ್ತರಿಸಿ ಕ್ಯಾನ್ಸರ್‌ ಬಾಧಿತರಿಗೆ ನೀಡುವ ಮೂಲಕ ಅವರ ಮುಖದಲ್ಲಿ ಕಿರುನಗೆ ಮೂಡಿಸಿದ್ದಾಳೆ.

ಜೋಳದಕೂಡ್ಲಿಗಿ ಗ್ರಾಮದ ಪ್ರಗತಿಪರ ಲೇಖಕ, ಉಪನ್ಯಾಸಕ ಡಾ. ಅರುಣ್‌ ಜೋಳದಕೂಡ್ಲಿಗಿ ಅವರ ಪುತ್ರಿ ಜಿ.ಎ. ನಿಹಾರಿಕಾ ಎನ್ನುವ 12 ವರ್ಷದ ಬಾಲಕಿ ತನ್ನ ಜನ್ಮದಿನವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾಳೆ.