ಸುಳ್ಳು ಕೇಸು ಹಾಕಿ ಜೈಲಿಗಟ್ಟಿದ ಪೊಲೀಸರು : 8 ತಿಂಗಳು ಜೈಲಲ್ಲಿ ಕಳೆದ ಯುವಕ

ನವದೆಹಲಿ: ಓರ್ವ ಅಪರಾಧಿಗೆ ಶಿಕ್ಷೆಯಾಗದೇ ಹೋದರೂ ಪರವಾಗಿಲ್ಲ, ಓರ್ವ ಅಮಾಯಕನಿಗೆ ಶಿಕ್ಷೆಯಾಗಬಾರದು ಎಂದು ಹೇಳುತ್ತದೆ ನಮ್ಮ ಕಾನೂನು ಆದರೆ 37 ವರ್ಷದ ವ್ಯಕ್ತಿಯೋರ್ವನಿಗೆ ಏನೂ ಮಾಡದಿದ್ದರೂ ಸುಳ್ಳು ಅಪರಾಧ ಪ್ರಕಣವೊಂದರಲ್ಲಿ ಶಿಕ್ಷೆಯಾಗಿದ್ದು, ಈಗ ನಿರಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಾರ್ಕೋಟಿಕ್ ಡ್ರಗ್ & ಸೈಕೋಟ್ರೋಪಿಕ್ ಸಬ್ಸ್‌ಸ್ಟೆನ್ಸ್‌ ಕಾಯಿದೆಯಡಿ ನಕಲಿ ಕೇಸಿನಿಂದಾಗಿ ಬಂಧಿತನಾಗಿದ್ದ ಅಂಕಿತ್ ಗುಪ್ತಾ ಎಂಬಾತನನ್ನು ಕೋರ್ಟ್ ಖುಲಾಸೆಗೊಳಿಸಿದೆ. 

ಮಾರ್ಚ್‌ 12, 2021ರ ರಾತ್ರಿ ಅವರ ಮದುವೆಯ ವಾರ್ಷಿಕೋತ್ಸವ ಇದ್ದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸಣ್ಣದಾದ ಪಾರ್ಟಿಯೊಂದನ್ನು ಆಯೋಜಿಸಲಾಗಿತ್ತು.  ಅವರ ಕಾರನ್ನು ಮನೆಯ ಹೊರಗೆ ನಿಲ್ಲಿಸಲಾಗಿತ್ತು. ಈ ವೇಳೆ ಬಂದ ಇಬ್ಬರು ಪೊಲೀಸರು ಕೆಟ್ಟ ಪದಗಳಿಂದ ಅಂಕಿತ್‌ನನ್ನು ನಿಂದಿಸುತ್ತಾ, ಕಾರನ್ನು ಆ ಸ್ಥಳದಿಂದ ತೆಗೆಯುವಂತೆ ಹೇಳಿದರು. ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸರು ಹಾಗೂ ಅಂಕಿತ್ ಮಧ್ಯೆ ಈ ವೇಳೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇದಾದ ಸ್ವಲ್ಪ ಹೊತ್ತನಲ್ಲೇ ಮೂವರು ಸಮವಸ್ತ್ರದಲ್ಲಿದ್ದ ಪೊಲೀಸರು ಆಗಮಿಸಿ ಅಂಕಿತ್‌ನ್ನು ಎಳೆದುಕೊಂಡು ಹೋಗಿದ್ದರು. ಮಾರನೇ ದಿನವೇ ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕೇಸು ದಾಖಲಿಸಿ ಕೂಡಲೇ ಆತನನ್ನು ಜೈಲಿಗಟ್ಟಿದ್ದರು. ಸಬ್ ಇನ್ಸ್‌ಪೆಕ್ಟರ್ ವಿಪಿನ್ ಕುಮಾರ್ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ಕೂಡ ದಾಖಲಿಸಿದ್ದರು.

Po