ಅಂತರಾಜ್ಯದಲ್ಲಿ 20 ಕಿಮೀ ಮಾತ್ರ ಉಚಿತ ಪ್ರಯಾಣ, ಆದ್ರೆ ಷರತ್ತು ಅನ್ವಯ: ಸಿದ್ದರಾಮಯ್ಯ

ಬೆಂಗಳೂರು:  ಶಕ್ತಿ ಯೊಜನೆಯ  ಅಡಿ ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಜೊತೆಗೆ ನೆರೆಯ ರಾಜ್ಯಗಳಲ್ಲಿ 20 ಕಿ.ಮೀ ವರೆಗೆ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ. ಅಂದರೆ ಬಳ್ಳಾರಿಯಂತಹ ಸ್ಥಳಗಳ ಮಹಿಳೆಯರು ಆಂಧ್ರ ಪ್ರದೇಶದಲ್ಲಿ 20 ಕಿಮೀ ದೂರದವರೆಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಯೋಜನೆಗೆ ಚಾಲನೆ ನೀಡುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದಾಗ್ಯೂ, ಕೆಲಸಕ್ಕಾಗಿ ಬೆಂಗಳೂರಿನಿಂದ ಹೊಸೂರಿಗೆ ಪ್ರಯಾಣಿಸುವ ಮಹಿಳೆಯರು 20 ಕಿಮೀ ಮಿತಿಯನ್ನು ಮೀರಿರುವುದರಿಂದ ಉಚಿತ ಪ್ರಯಾಣದ ನಿಬಂಧನೆಯಿಂದ ಪ್ರಯೋಜನ ಪಡೆಯುವುದಿಲ್ಲ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳು ನೆರೆಯ ರಾಜ್ಯಗಳಲ್ಲಿ 20 ಕಿ.ಮೀ ವರೆಗೆ ಪ್ರಯಾಣಿಸಬಹುದು. ಉದಾಹರಣೆಗೆ, ಬಳ್ಳಾರಿಯಿಂದ ಆಂಧ್ರಪ್ರದೇಶದ ಒಳಗೆ 20 ಕಿ.ಮೀ ವರೆಗೆ ಪ್ರಯಾಣಿಸುವ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಿದ್ದರಾಮಯ್ಯ ಎಂದು ಹೇಳಿದರು.

ಆದರೆ, ಅಂತರ್ ರಾಜ್ಯ ಬಸ್‌ಗಳನ್ನು ಬಳಸುವ ಮಹಿಳೆಯರಿಗೆ ಈ ಸೇವೆ ಅನ್ವಯಿಸುವುದಿಲ್ಲ. “ಮಹಿಳೆಯೊಬ್ಬರು ತಿರುಪತಿಗೆ ಹೋಗಲು ಬಯಸಿದರೆ, ಅವರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ”. ಅವರು ಮುಳಬಾಗಿಲು (ಕೋಲಾರ ಜಿಲ್ಲೆ ಆಂದ್ರ ಪ್ರದೇಶ ಗಡಿ) ವರೆಗೆ ಮಾತ್ರ ಉಚಿತವಾಗಿ ಹೋಗಬಹುದು. ನಂತರ ಇನ್ನೊಂದು ಬಸ್‌ನಲ್ಲಿ ಹೋಗಬೇಕು. ಅಂತೆಯೇ, ಬೆಂಗಳೂರಿನಿಂದ ಹೊಸೂರಿಗೆ ಕೆಲಸಕ್ಕಾಗಿ ಸುಮಾರು 40 ಕಿ.ಮೀ ಪ್ರಯಾಣಿಸುವ ನೂರಾರು ಮಹಿಳೆಯರಿಗೆ ಈ ಯೋಜನೆ ಪ್ರಯೋಜನವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಭಾನುವಾರ ಯೋಜನೆಗೆ ಚಾಲನೆ ನೀಡಲಿದ್ದೇನೆ. ಎಲ್ಲಾ ಮಹಿಳೆಯರು ಎಸಿ ಮತ್ತು ವೋಲ್ವೋ ಹೊರತುಪಡಿಸಿ ಎಲ್ಲಾ ಸರ್ಕಾರಿ ಸ್ವಾಮ್ಯದ ಬಸ್‌ಗಳಲ್ಲಿ ಎಕ್ಸ್‌ಪ್ರೆಸ್ ಬಸ್ ಸೇವೆಗಳು ಸೇರಿದಂತೆ ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಲು ಅರ್ಹರಾಗಿರುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.