ಜೋಯಿಡಾ : ತಾಲ್ಲೂಕಿನ 33/11 ಕೆವಿ ಜೋಯಿಡಾ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ 11 ಕೆವಿ ವಿದ್ಯುತ್ ಮಾರ್ಗದ ತುರ್ತು ನಿರ್ವಹಣೆ ಮತ್ತು ಜಂಗಲ್ ಕಟ್ಟಿಂಗ್, 33 ಕೆವಿ ವಿದ್ಯುತ್ ಮಾರ್ಗದ ಹೊಸ ಗೋಪುರಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು.
ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತ ಮಲ್ಯ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ ಅವರ ಮಾರ್ಗದರ್ಶನದಲ್ಲಿ ಹೆಸ್ಕಾಂ ಶಾಖಾಧಿಕಾರಿ ಜೋಸೆಫ್.ಕೆ.ಫೆರ್ನಾಂಡೀಸ್ ಅವರ ನೇತೃತ್ವದಲ್ಲಿ ಹೆಸ್ಕಾಂ ಸಿಬ್ಬಂದಿಗಳು ಹಾಗೂ ಹೆಸ್ಕಾಂ ಗುತ್ತಿಗೆ ಸಿಬ್ಬಂದಿಗಳು ಮುತುವರ್ಜಿ ವಹಿಸಿ ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.