ದಾಂಡೇಲಿ :ದಾಂಡೇಲಿ ಸೋಮಾನಿ ವೃತ್ತದ ಹತ್ತಿರ ಸ್ಕೂಟಿ ಸ್ಕಿಡ್- ಸವಾರರಿಗೆ ಗಾಯ

ದಾಂಡೇಲಿ : ನಗರದ ಸೋಮಾನಿ ವೃತ್ತದ ಹತ್ತಿರ ಸ್ಕೂಟಿಯೊಂದು ಸ್ಕಿಡ್ ಆಗಿ ಬಿದ್ದು, ವಾಹನದಲ್ಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯವಾದ ಘಟನೆ ನಡೆದಿದೆ.

ಗಾಯಗೊಂಡವರು ಸ್ಥಳೀಯ ಗಾಂಧಿನಗರದ ನಸ್ರತ್ ದೇಸೂರು ಮತ್ತು ಗೌಸ್ ಮೋಹಿದ್ದೀನ್ ಎಂದು ತಿಳಿದುಬಂದಿದ್ದು, ಗಾಯಗೊಂಡ ಇಬ್ಬರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.