ಹಳಿಯಾಳ :ಹಳಿಯಾಳ ಪಟ್ಟಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿಕ್ಕಿ- ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ದೃಶ್ಯ

ಹಳಿಯಾಳ : ಪಟ್ಟಣದ ಲಕ್ಷ್ಮಣ ಪ್ಯಾಲೇಸ್ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಚಾಲಕನ ನಿಮಂತ್ರಣ ತಪ್ಪಿ ವೃತ್ತದ ಕಟ್ಟೆಗೆ ಕಾರು ಡಿಕ್ಕಿಯಾದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅತೀ ವೇಗವಾಗಿ ಬರುತ್ತಿದ್ದ ಕೆಎ : 02, ಎಎಫ್: 5432 ನೊಂ ಸಂಖ್ಯೆಯ ಸ್ವಿಪ್ಟ್ ಡಿಸೈರ್ ಕಾರೊಂದು ಲಕ್ಷ್ಮಣ ಪ್ಯಾಲೇಸ್ ಮುಂಭಾಗದ ರಸ್ತೆಯಲ್ಲಿರುವ ವೃತ್ತದ ಕಟ್ಟೆಗೆ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಕಾರಿನ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕಾರಿಗೂ ಹಾನಿಯಾಗಿದೆ.