ಜೋಯಿಡಾ : ತಾಲೂಕಿನ ಅನಮೋಡ ಉಪಕೇಂದ್ರದ ಸೂಪಾ-ಗೋವಾ 110 ಕೆವಿ ಮಾರ್ಗದ ವಾಹಕ ಮತ್ತು ಗೋಪುರಗಳನ್ನು ಬದಲಾಯಿಸುವ ಕಾಮಗಾರಿಯು ಯಶಸ್ವಿಯಾಗಿ ಸಂಪನ್ನಗೊಂಡಿತು.
110/11 ಕೆವಿ ಅನಮೋಡ ಉಪಕೇಂದ್ರದ ಸೂಪಾ-ಗೋವಾ 110 ಕೆವಿ ಮಾರ್ಗದ ವಾಹಕ ಮತ್ತು ಗೋಪುರಗಳನ್ನು ಬದಲಾಯಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಜೋಯಿಡಾ ತಾಲ್ಲೂಕಿನ ಅಖೇತಿ, ಬಜಾರಕುನಂಗ, ಕ್ಯಾಸಲ್ ರಾಕ್, ಅಸು ಗ್ರಾಮ ಪಂಚಾಯ್ತುಗಳಿಗೆ ಸಂಬಂಧಪಟ್ಟ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿಲಿರುವುದನ್ನು ಹೆಸ್ಕಾಂ ಈ ಮೊದಲೆ ಪ್ರಕಟಣೆಯಲ್ಲಿ ತಿಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ ಮಲ್ಯ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ ಅವರ ಮಾರ್ಗದರ್ಶನದಲ್ಲಿ ಶಾಖಾಧಿಕಾರಿ ಶೀತಲ್ ಬೋಸ್ಲೆಯವರ ನೇತೃತ್ವದಲ್ಲಿ ಹೆಸ್ಕಾಂ ಸಿಬ್ಬಂದಿಗಳು ಮತ್ತು ಗುತ್ತಿಗೆ ಸಿಬ್ಬಂದಿಗಳು ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.