ಹಳಿಯಾಳ :ಹಳಿಯಾಳ ಪಟ್ಟಣದ ವಾರ್ಡ್ ನಂ: 06 ರ ಹೊಸೂರು ಗಲ್ಲಿಯಲ್ಲಿ ಭರದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ

ಹಳಿಯಾಳ : ಪಟ್ಟಣದ ವಾರ್ಡ್ ನಂ: 06 ರಲ್ಲಿ ಬರುವ ಹೊಸೂರು ಗಲ್ಲಿಯಲ್ಲಿ ರಸ್ತೆ ಕಾಮಗಾರಿಯೂ ಭರದಿಂದ ನಡೆಯುತ್ತಿದೆ. ಪುರಸಭೆಯ ಅಧ್ಯಕ್ಷರಾದ ಅಜರ್ ಬಸರೀಕಟ್ಟಿಯವರು ಪ್ರತಿನಿಧಿಸುವ ವಾರ್ಡ್ ಇದಾಗಿದ್ದು, ವಾರ್ಡಿನ ಜನತೆಯ ರಸ್ತೆ ನಿರ್ಮಾಣದ ಬೇಡಿಕೆಗೆ ಅಜರ್ ಬಸರೀಕಟ್ಟಿಯವರು ಅಸ್ತು ಎಂದು ವಿಶೇಷ ಮುತುವರ್ಜಿ ವಹಿಸಿ ರಸ್ತೆ ಕಾಮಗಾರಿಗೆ ಶಾಸಕ ಆರ್.ವಿ.ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ.

ಸಿಮೆಂಟ್ ರಸ್ತೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಒಂದೆರಡು ದಿನಗಳೊಳಗೆ ಕಾಮಗಾರಿ ಸಂಪೂರ್ಣ ಮುಗಿಯಲಿದೆ. ಇಂದು ಪುರಸಭೆಯ ಅಧ್ಯಕ್ಷರಾದ ಅಜರ್ ಬಸರಿಕಟ್ಟಿಯವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.