ಜೋಯಿಡಾ: ತಾಲೂಕಿನ ಕುಂಬಾರವಾಡಾ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ನಟ ರಿಷಬ್ ಶೆಟ್ಟಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾನವ ಮತ್ತು ವನ್ಯ ಪ್ರಾಣಿಗಳ ಸಮಸ್ಯೆ ಎಂದಿಗೂ ಇರುವಂತದ್ದು , ಅರಣ್ಯ ಇಲಾಖೆ ಹಾಗೂ ಹಳ್ಳಿಗಾಡಿನ ಜನರ ನಡುವೆ ಸಂಘರ್ಷ ಸರ್ವೆ ಸಾಮಾನ್ಯ, ಕೆಲವು ಕಾನೂನುಗಳಿಗೆ ಜನರು ತಲೆಬಾಗಬೇಕಾಗುತ್ತದೆ, ಆದರೆ ಅದೇ ಕಾನೂನಿಗೆ ಜೀವವೇ ನೀಡಲು ಸಾಧ್ಯವಿಲ್ಲ, ಅರಣ್ಯವು ಉಳಿಯಬೇಕು, ಜನರಿಗೂ ಮೂಲ ಸೌಕರ್ಯಗಳು ಸಿಗಬೇಕು ಈ ನಿಟ್ಟಿನಲ್ಲಿ ನಾವು ಇಂದು ವನ್ಯಜೀವಿ ಸಂರಕ್ಷಣಾ ಅಭಿಯಾನ ನಡೆಸುತ್ತಿದ್ದೇವೆ, ಇಂದು ಕಾಡು ನಾಶವಾಗುತ್ತಿದೆ, ನಗರ ಪ್ರದೇಶದಲ್ಲಿ ಹೆಚ್ಚಾದ ಮಾಲಿನ್ಯದಿಂದಾಗಿ ಪರಸರ ನಾಶವಾಗುತ್ತಿದೆ, ಹಳ್ಳಿಗಾಡಿನ ಜನರು ಕಾಡು ಉಳಿಸಿದ್ದಾರೆ, ಈ ಕಾಡು ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ಉಸಿರಾಡಲು ಗಾಳಿ, ಮಳೆ ಎಲ್ಲವೂ ಸಿಗುತ್ತದೆ, ಅರಣ್ಯ ಇಲಾಖೆ ಮತ್ತು ಕಾಡಿನ ಅಂಚಿನ ಜನರು ಹೊಂದಾಣಿಕೆಯ ಮೂಲಕ ಬದುಕಬೇಕು ಹಾಗೂ ಅರಣ್ಯ ಸಂರಕ್ಷಿಸಬೇಕು ಎಂಬುದೇ ಈ ಅಭಿಯಾನದ ಮೂಲ ಉದ್ದೇಶ ಎಂದರು.
ಈ ಸಂದರ್ಭದಲ್ಲಿ ಕುಂಬಾರವಾಡಾ ಗ್ರಾಮ ಪಂಚಾಯತ್‌ಗೆ ಅತ್ಯುತ್ತಮ ಅರಣ್ಯ ಸ್ನೇಹಿ ಗ್ರಾಮ ಪಂಚಾಯತ್ ಪ್ರಶಸ್ತಿ ನೀಡಲಾಯಿತು.
ವೇದಿಕೆಯಲ್ಲಿ ಕುಂಬಾರವಾಡಾ ಗ್ರಾ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಡೇರೆಕರ, ಸುವರ್ಣ ನ್ಯೂಸ್ ನ ಅಜಿತ ಹನುಮಕ್ಕನವರ,ಜೋಯಿಡಾ ಸಿಪಿಐ ಮಹಾಂತೇಶ ಹೊಸಪೇಟ,ಅರಣ್ಯ ಇಲಾಖೆಯ ಡಿಎಪ್ಓ ಬಾಲಚಂದ್ರ, ಎಸಿಎಪ್ ಅಮರಾಕ್ಷರ, ಎಸ್,ಎಸ್ ನಿಂಗಾಣಿ ಇತರರು ಉಪಸ್ಥಿತರಿದ್ದರು.