ಸಿದ್ದಾಪುರ : ಯಶಸ್ವಿಯಾಗಿ ಮುಕ್ತಾಯಗೊಂಡ ವಾರ್ಷಿಕ ಕ್ರೀಡಾಕೂಟ.

ಸಿದ್ದಾಪುರ : ತಾಲೂಕಿನ ತ್ಯಾರ್ಸಿ ಸಮೀಪವಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವು ಎರಡು ದಿನಗಳ ಕಾಲ ನಡೆದು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಶುಕ್ರವಾರ ಕ್ರೀಡಾಕೂಟವನ್ನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಕರ್ಕಿ ಉದ್ಘಾಟಿಸಿದರು,

ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಭೋದಿಸಲಾಯಿತು,

ಮೊದಲ ದಿನ ವೈಯಕ್ತಿಕ ಕ್ರೀಡೆಗಳು ಜರುಗಿದವು ಶನಿವಾರ ಗುಂಪು ಕ್ರೀಡೆಗಳು ನಡೆದವು,

ಕ್ರೀಡಾ ಕಾರ್ಯದರ್ಶಿಯಾದ ಕಾರ್ತಿಕ್ ನಾಯ್ಕ್ ರವರು ಮೊದಲ ಬಾರಿಗೆ ಮ್ಯಾಟ್ ಮಾದರಿಯ ಕಬಡ್ಡಿ ಆಯೋಜಿಸಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು.