ಭಟ್ಕಳ -ಕಾರವಾರ ಚತುಷ್ಪತ ಕಾಮಗಾರಿಯ ಗುತ್ತಿಗೆ ಪಡೆದಿರುವ ಐಆರ್ಬಿ ಕಂಪನಿಯು ಕಾಮಗಾರಿ ಪೂರ್ಣಗೊಳಿಸದೇ ಶುಲ್ಕ ವಸೂಲಿ ಮಾಡುತ್ತಿರುವುದು ಸರಿಯಲ್ಲ ಎಂದು ಕರವೇ ಜಿಲ್ಲಾದ್ಯಕ್ಷ ಭಾಸ್ಕರ್ ಪಟಗಾರ ಪ್ರಶ್ನಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಾಮಗಾರಿ ಪೂರ್ಣಗೊಳ್ಳುವರೆಗೂ ಶುಲ್ಕ ವಸೂಲಾತಿ ಮಾಡಬಾರದು ಎಂದು ಸಾಕಷ್ಟು ಬಾರಿ ಐಆರ್ಬಿ ಕಂಪೆನಿ ಮತ್ತು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಸಿದ್ದೇವೆ. ಆದರೆ ಸೂಕ್ತ ಕ್ರಮ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದೆ ಮಳೆಗಾಲದಲ್ಲೂ ಅಲ್ಲಿ ನೀರು ತುಂಬುವುದು ಇಲ್ಲವೇ ಗುಡ್ಡ ಕುಸಿಯುವ ಸಮಸ್ಯೆ ತೆಲೆದೂರುತ್ತಿರುತ್ತದೆ. ಈ ಬಗ್ಗೆ ಗುತ್ತಿಗೆ ಕಂಪೆನಿ ಬಗ್ಗೆ ಸೇರಿದಂತೆ ಯಾರೂ ತೆಲೆಕೆಡಿಸಿಕೊಳ್ಳುತ್ತಿಲ್ಲ. ಮುಂದೆನಾದರೂ ಇಲ್ಲಿ ಜೀವ, ಆಸ್ತಿ ಪಾಸ್ತಿ ಹಾನಿಯಾದರೆ ಗುತ್ತಿಗೆ ಕಂಪೆನಿಯನ್ನು ನಂಬರ್ ಒನ್ ಆರೋಪಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು…
ಐಆರ್ಬಿ ಮಾಡುತ್ತಿರುವ ಅವ್ಯವಸ್ಥೆಯ ಬಗ್ಗೆ ಕರವೇ ನಿರಂತರವಾಗಿ ಹೋರಾಟ ನೆಡೆಸುತ್ತಿದೆ. ಚತುಷ್ಪತ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಇಲ್ಲವಾದಲ್ಲಿ ಕರವೇ ಘಟಕದ ಅಧ್ಯಕ್ಯ ನಾರಾಯಣಗೌಡ ಅವರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದ ಎಂದು ಎಚ್ಚರಿಸಿದರು..