ಬೆಂಗಳೂರು: ಫ್ರೀ ಕೋರ್ಸ್ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ ಆಂಧ್ರಪ್ರದೇಶ(Andhra Pradesh) ಮೂಲದ ಶ್ರೀನಿವಾಸಲುನನ್ನು ಪೊಲೀಸರು ಬಂಧಿಸಿದ್ದಾರೆ. ಜಯನಗರ(Jayanagara)ದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದಿದ್ದ ಅರೋಪಿ ಶ್ರೀನಿವಾಸಲು, ಡೇಟಾ ಸೈನ್ಸ್ ಅನಲೈಸ್ ಹೆಸರಿನಲ್ಲಿ ಕೋರ್ಸ್ ತೆರೆದಿದ್ದು, ಶಿಕ್ಷಣ ಸಂಸ್ಥೆಗೆ ಸುಮಾರು 2,500 ವಿದ್ಯಾರ್ಥಿಗಳು ದಾಖಲಾಗಿದ್ದರು. ಮಕ್ಕಳ ದಾಖಲಾತಿ ಪಡೆದು ಪ್ರವೇಶ ಮಾಡಿಸಿಕೊಂಡಿದ್ದ ಆರೋಪಿ. ದಾಖಲಾತಿ ಬಳಸಿ ಬ್ಯಾಂಕ್ನಲ್ಲಿ ಲೋನ್ ಮಾಡಿ, ನಂತರ ವಿದ್ಯಾರ್ಥಿಗಳ ಖಾತೆಗೆ ಬರುತ್ತಿದ್ದ ಲೋನ್ ಹಣ ಪಡೆದುಕೊಳ್ಳುತ್ತಿದ್ದ. ಇದೀಗ ಲೋನ್ ಕಟ್ಟದೆ ಬ್ಯಾಂಕ್ಗಳಿಗೆ ಶ್ರೀನಿವಾಸಲು ವಂಚನೆ ಮಾಡಿದ್ದ ಆರೋಪದ ಮೇಲೆ ಅರೆಸ್ಟ್ ಮಾಡಲಾಗಿದೆ.
ಶ್ರೀನಿವಾಸಲು ವಿರುದ್ಧ ಸುಮಾರು 46 ವಿದ್ಯಾರ್ಥಿಗಳು ದೂರು
ಹೌದು ಆತನ ಬಂಡವಾಳ ವಿದ್ಯಾರ್ಥಿಗಳಿಗೆ ತಿಳಿಯುತ್ತಿದ್ದಂತೆ ಶ್ರೀನಿವಾಸಲು ವಿರುದ್ಧ ಸುಮಾರು 46 ವಿದ್ಯಾರ್ಥಿಗಳು ದೂರು ನೀಡಿದ್ದರು. ಈ ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿ, ತನಿಖೆ ವೇಳೆ ಸುಮಾರು 18 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಕೋಡಲೇ ಆರೋಪಿ ಶ್ರೀನಿವಾಸಲುನನ್ನ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ; ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್ಗಳ ಬಂಧನ
ಬೆಂಗಳೂರು: ರಾಜ್ಯ ಇತ್ತೀಚೆಗೆ ಡ್ರಗ್ಸ್ , ಗಾಂಜಾ ಜಾಲಗಳು ಪತ್ತೆಯಾಗುತ್ತಿದ್ದು, ಈ ಹಿನ್ನಲೆ ಕಟ್ಟುನಿಟ್ಟಿನ ಕ್ರಮವಹಿಸಿದ್ದ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು, ಡ್ರಗ್ಸ್ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಿದ್ದಾರೆ. ಹೌದು ಇಂದು(ಜೂ.1) ನಗರದ ವಿವಿಧೆಡೆ ದಾಳಿ ನಡೆಸಿದ್ದ ಪೊಲೀಸರು ಗಾಂಜಾ, ಇತರೆ ಮಾದಕ ವಸ್ತು ಸೇವಿಸುತ್ತಿದ್ದ 18 ಜನ ಸೇರಿ 3 ಡ್ರಗ್ ಪೆಡ್ಲರ್ಗಳ ಬಂಧಿಸಿದ್ದಾರೆ. ಡ್ರಗ್ ಪೆಡ್ಲರ್ಗಳ ಬಳಿಯಿದ್ದ 2.5 ಕೆಜಿ ಗಾಂಜಾ, 11 ಗ್ರಾಂ ಎಂಡಿಎಂಎ, 7 ಗ್ರಾಂ ಹೈಡ್ರಾ ಮ್ಯಾಂಗೋ ವಶಕ್ಕೆ ಪಡೆದಿದ್ದಾರೆ.