9ನೇ ಬಾರಿಗೆ ಶಾಸಕರಾದ ಆಯ್ಕೆಯಾದ ಆರ್.ವಿ.ದೇಶಪಾಂಡೆ ಅವರಿಗೆ ಜೋಯಿಡಾದಲ್ಲಿ ಅದ್ದೂರಿ ಸ್ವಾಗತ

ಜೋಯಿಡಾ : 9ನೇ ಬಾರಿ ಶಾಸಕರಾಗಿ ಆಯ್ಕೆಯಾದ ಆರ್ ವಿ.ದೇಶಪಾಂಡೆ ಅವರನ್ನು ಜೋಯಿಡಾದಲ್ಲಿ ಅದ್ದೂರಿಯಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇಂದು ಬುಧವಾರ ಬೆಳಿಗ್ಗೆ 10.30 ಗಂಟೆಗೆ ಸ್ವಾಗತಿಸಿದರು.

ಜೋಯಿಡಾ ತಾಲ್ಲೂಕಿನ ಬಾಪೇಲಿ ಕ್ರಾಸ್ ನಿಂದ 5 ಕಿ.ಮೀ ಬೈಕ ರ್ಯಾಲಿಯ ಮೂಲಕ ಜೋಯಿಡಾಕ್ಕೆ ಆಗಮಿಸಿದ ಆರ್.ವಿ‌.ದೇಶಪಾಂಡೆ ಅವರು ಜೋಯಿಡಾ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ನಂತರ ಜೋಯಿಡಾದ ಕುಣಬಿ‌ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌.ವಿ.ದೇಶಪಾಂಡೆ ಅವರಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ಇದು ನನ್ನ ಗೆಲುವಲ್ಲ ನನ್ನ ಅಭಿಮಾನಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಗೆಲುವು, ಕ್ಷೇತ್ರದ ಮತದಾರರಿಗೆ ನನ್ನ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ಕೆಪಿ‌ಸಿಸಿ ಸದಸ್ಯ ಸದಾನಂದ ದಬ್ಗಾರ,‌ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ, ಕಿಸಾನ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರವಿ ರೇಡ್ಕರ್, ಮಾಜಿ.ಜಿ.ಪಂ.ಸದಸ್ಯ ರಮೇಶ್ ನಾಯ್ಕ, ಉಳವಿಯ ಮಂಜುನಾಥ ಮೋಕಾಶಿ, ಮಂಗೇಶ ಕಾಮತ್, ಆರೀಶ್ ಖಾದರ್, ತುಷಾರ್ ಸುಂಟನಕರ್, ಅರುಣ್ ಭಾಗವತಿರಾಜ್‌ ಮೊದಲಾದವರು ಉಪಸ್ಥಿತರಿದ್ದರು.