ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರ ಅಲೆಗೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನೋರ್ವನನ್ನು ಅಲ್ಲಿನ ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.
ರಕ್ಷಣೆಯಾದ ಪ್ರವಾಸಿಗನನ್ನು ಉದಯ ಕುಮಾರ್ ಕೊಯಂಬತ್ತೂರು ನಿವಾಸಿ ಎಂದು ತಿಳಿದು ಬಂದಿದೆ. ಈತ ಕೊಯಂಬತ್ತೂರಿನಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದ ವೇಳೆ ದೇವರ ದರ್ಶನ ಮುಗಿಸಿ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿರುವದನ್ನು ಗಮನಿಸಿದ ಅಲ್ಲಿನ ಲೈಫ್ ಗಾರ್ಡ್ ಸಿಬ್ಬಂದಿ ಹಾಗೂ ಬೀಚ್ ಮೇಲ್ವಿಚಾರಕರು ತಕ್ಷಣ ಬೋಟ್ ನ ಸಹಾಯದಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ತಡಕ್ಕೆ ಕರೆ ತಂದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೀಚ್ ಮೇಲ್ವಿಚಾರಕರು ದತ್ತಾತ್ರೇಯ ಶೆಟ್ಟಿ , ಲೈಫ್ ಗಾರ್ಡ್ ಗಳಾದ ಜೈ ರಾಮ್, ಸತೀಶ, ಪಾಂಡು ಹಾಗೂ ಸಚಿನ್ ಉಪಸ್ಥಿತರಿದ್ದರು