ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು 2023-24ನೇ ಸಾಲಿನ ಪ.ಪಂಗಡದ ಕ್ರೀಡಾ ವಸತಿ ನಿಲಯಕ್ಕೆ ಪ.ಪಂ ಕ್ರೀಡಾಪಟುಗಳ ಆಯ್ಕೆಯ ಪ್ರಕ್ರಿಯೆಯನ್ನು ಮೇ 29ರಂದು ಯಲ್ಲಾಪುರ ತಾಲೂಕು ಕ್ರೀಡಾಂಗಣ ಮತ್ತು ಮೇ 30ರಂದು ಹಳಿಯಾಳ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಕ್ರೀಡಾಪಟುಗಳು 7 ಮತ್ತು 8 ನೇ ತರಗತಿಗೆ ಅರ್ಹತೆ ಪಡೆದಿರಬೇಕು, 2023ಕ್ಕೆ ಕ್ರೀಡಾಪಟುವಿನ ವಯಸ್ಸು 14 ವರ್ಷ ಮೀರಿರಬಾರದು. ಪ.ಪಂಗಡ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಭಾಗವಹಿಸುವ ಬಾಲಕ/ಬಾಲಕಿಯರು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ- 9945489193, 7019565606..