ಪ್ರೀತಿಸಿದವನ ಜೊತೆಗೇ ಬಾಳಬೇಕೆಂದು ನಿರ್ಧರಿಸಿ ಮನೆ ಬಿಟ್ಟು ಬಂದಿದ್ದಾಳೆ ಯುವತಿ, ಪ್ರಾಣ ಬೆದರಿಕೆಯಿದೆ ರಕ್ಷಿಸಿ ಅಂತಾ ಯಾದಗಿರಿ ಎಸ್ಪಿ ಕಚೇರಿ ಎದುರು ನಿಂತುಬಿಟ್ಟಿದ್ದಾಳೆ!

ಆ ಇಬ್ಬರು ಪ್ರೇಮಿಗಳು (lovers) ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡ್ತಾಯಿದ್ದಾರೆ. ಯುವತಿ ಮನೆಯಲ್ಲಿ ಪ್ರೇಮದ ವಿಚಾರ ಗೊತ್ತಾಗುತ್ತಿದ್ದ ಹಾಗೆ ಬೇರೆ ಕಡೆ ಮದುವೆ ಮಾಡಲು ಸಹ ಮುಂದಾಗಿದ್ರು. ಆದ್ರೆ ಯುವತಿ ತಾನು ಪ್ರೀತಿಸಿದ ಯುವಕನ ಜೊತೆಗೆ ಬಾಳಬೇಕೆಂದು ನಿರ್ಧರಿಸಿ ಮನೆ ಬಿಟ್ಟು ಬಂದಿದ್ದಾಳೆ. ಮದುವೆಯಾಗಿ ವಾಪಸ್ ಹೋಗಬೇಕು ಅಂದ್ರೆ ಕುಟುಂಬಸ್ಥರು ಪ್ರಾಣ ತೆಗೆಯುವುದಾಗಿ ಹೇಳಿ ಬೆದರಿಕೆ ಹಾಕುತ್ತಿದ್ದಾರಂತೆ. ಇದೆ ಕಾರಣಕ್ಕೆ ಯುವ ಪ್ರೇಮಿಗಳು ಕೊನೆಗೆ ಪೊಲೀಸರಿಂದ ರಕ್ಷಣೆ ಮುಂದಾಗಿದ್ದಾರೆ. ಪ್ರೇಮಿಗಳಿಗೆ ಎದುರಾದ ಪ್ರಾಣ ಭಯ.. ಊರಿಗೆ ಕಾಲಿಡುವ ಹಾಗಿಲ್ಲ, ಕಾಲಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ (life threat). ನಾವು ಮದುವೆಯಾಗಿ ಜೊತೆಯಾಗಿ ಬಾಳಬೇಕು ರಕ್ಷಣೆ ಕೊಡಿ ಎಂದು ಬೇಡಿಕೊಳ್ಳುತ್ತಿರುವ ಪ್ರೇಮಿಗಳು. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದ ಎಸ್ ಪಿ ಕಚೇರಿ ಬಳಿ (yadagiri SP).

ಹೌದು ಒಬ್ಬರಿಗೊಬ್ಬರು ಹೀಗೆ ಕೈ ಹಿಡಿದುಕೊಂಡು ಓಡಾಡುತ್ತಿರುವ ಈ ಇಬ್ಬರೂ ಪ್ರೇಮಿಗಳು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡ್ತಾಯಿದ್ದಾರೆ. ಯಾದಗಿರಿ ತಾಲೂಕಿನ ಬಾಡಿಯಾಳ್ ಗ್ರಾಮದವರಾದ ದೇವಪ್ಪ ಹಾಗೂ ನರಸಮ್ಮ ಒಂದೇ ಊರಿನವರಾಗಿದ್ದಾರೆ. ದೂರದಿಂದ ಸಂಬಂಧಿಕರೆ ಆಗಿರುವ ಇವರು ಅಕ್ಕಪಕ್ಕದ ಮನೆಯವರು ಕೂಡ ಆಗಿದ್ದಾರೆ.
ಹೀಗಾಗಿ ಕಳೆದ ಒಂದು ವರ್ಷದ ಹಿಂದೆ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿದೆ. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುವ ಯುವಕ ದೇವಪ್ಪ ಮತ್ತು ಮನೆಯಲ್ಲಿ ಇದ್ದು ಮನೆ ಕೆಲಸ ಮಾಡಿಕೊಂಡಿದ್ದ ನರಸಮ್ಮ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಕಳೆದ ಒಂದು ವರ್ಷದಿಂದ ನಿರಂತರ ಸಂಪರ್ಕದಲ್ಲಿದ್ದಾರೆ.

ಆದ್ರೆ ಕಳೆದ ಕೆಲ ದಿನಗಳ ಹಿಂದೆ ಇಬ್ಬರ ನಡುವಣ ಪ್ರೀತಿ ಪ್ರೇಮದ ವಿಚಾರ ಯುವತಿ ಕುಟುಂಬಸ್ಥರಿಗೆ ಗೊತ್ತಾಗಿದೆ. ಇದೆ ಕಾರಣಕ್ಕೆ ಇಬ್ಬರ ಪ್ರೀತಿಯ ವಿಷಯ ಗೊತ್ತಾಗಿ ಯುವತಿಯ ಕುಟುಂಬಸ್ಥರು ಕೆಂಡಾಮಂಡಲರಾಗಿದ್ದಾರೆ. ಜಾತಿ ಒಂದೆಯಾಗಿದ್ದರೂ ಯುವಕ ಬಡ ಕುಟುಂಬಸ್ಥನಾಗಿದ್ದರಿಂದ ಯುವತಿ ಕುಟುಂಬಸ್ಥರು ಮದುವೆಗೆ ಒಪ್ಪುತ್ತಿಲ್ಲ.
ಇನ್ನು ಯುವಕನ ಕುಟುಂಬಸ್ಥರಿಗೆ ನ್ಯಾಯ ಪಂಚಾಯ್ತಿ ಮಾಡಿ ದಂಡ ವಸೂಲಿ ಮಾಡುವ ಕೆಲಸ ಮಾಡಿ ಇನ್ನೊಮ್ಮೆ ನಮ್ಮ ಮಗಳ ತಂಟೆಗೆ ಬರದಂತೆ ವಾರ್ನಿಂಗ್ ಮಾಡಿದ್ದಾರೆ. ಇನ್ನು ಯುವತಿಯನ್ನ ಬೇರೆ ಕಡೆ ಗಂಡು ನೋಡಿ ಮದುವೆ ಮಾಡಲು ಸಹ ಪ್ಲಾನ್ ಮಾಡಿದ್ದಾರೆ. ಆದ್ರೆ ಯುವತಿ ಮಾತ್ರ ತಾನು ಪ್ರೀತಿಸುತ್ತಿರುವ ದೇವಪ್ಪನ ಜೊತೆಗೆ ಬಾಳುತ್ತೇನೆ ಎಂದು ಹಠ ಹಿಡಿದ್ದಿದ್ದಾಳೆ. ಮನೆಯಲ್ಲಿ ಒಪ್ಪದ ಕಾರಣಕ್ಕೆ ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮನೆ ಬಿಟ್ಟು ಯುವಕನ ಜೊತೆ ಸೇರಿಕೊಂಡಿದ್ದಾಳೆ.
ದೇವಪ್ಪ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಆದ್ರೆ ಯುವತಿ ಮನೆಯವರು ಮಾತ್ರ ಸ್ವಲ್ಪಮಟ್ಟಿಗೆ ಶ್ರೀಮಂತರು ಆಗಿರುವುದರಿಂದ ದೇವಪ್ಪನಿಗೆ ಮಗಳನ್ನ ಕೊಟ್ಟು ಮದುವೆ ಮಾಡಿದರೆ ತಮ್ಮ ಅಂತಸ್ತಿಗೆ ಧಕ್ಕೆ ಬರುತ್ತೆ ಅಂತ ಪೋಷಕರು ಹೇಳುತ್ತಿದ್ದಾರಂತೆ. ಇಬ್ಬರೂ ಪ್ರೇಮಿಗಳ ಮದುವೆಗೆ ಇನ್ನೊಂದು ಕಾರಣ ಇದೆ ಅಂತ ಹೇಳಲಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಈ ಎರಡು ಕುಟುಂಬಗಳ ಮಧ್ಯೆ ಕುರಿಗಳ ವಿಚಾರಕ್ಕೆ ಜಗಳ ಆಗಿದೆಯಂತೆ. ಕುರಿಗಳು ಕಾಯುವ ವಿಚಾರಕ್ಕೆ ಕಳೆದ ಕೆಲ ವರ್ಷಗಳ ಹಿಂದೆ ದೊಡ್ಡ ಪ್ರಮಾಣದಲ್ಲಿ ಜಗಳ ಆಗಿದೆ. ಇಲ್ಲಿಂದ ಎರಡು ಕುಟುಂಬಗಳ ಮಧ್ಯೆ ವೈರತ್ವ ಮನೆ ಮಾಡಿದೆ. ಹೀಗಾಗಿ ದುಷ್ಮನ್ ಕುಟುಂಬದ ಯುವಕನಿಗೆ ಮಗಳನ್ನ ಕೊಟ್ಟು ಯಾವುದೇ ಕಾರಣಕ್ಕೆ ಮದುವೆ ಮಾಡಲ್ಲ ಅಂತ ಯುವತಿಯ ಪೋಷಕರು ಹೇಳುತ್ತಿದ್ದಾರಂತೆ.
ಇದೆ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಇಬ್ಬರೂ ಪ್ರಾಣ ಭಯದಿಂದ ತಮ್ಮೂರು ಬಿಟ್ಟು ಊರೂರು ಅಲೆಯುತ್ತಿದ್ದಾರೆ. ವಾಪಸ್ ಊರಿಗೆ ಹೋಗಬೇಕು ಅಂದ್ರೆ ಯುವತಿಯ ಪೋಷಕರು ಕೊಲೆ ಮಾಡುತ್ತಾರೆ ಅಂತ ಭಯ ಶುರುವಾಗಿದೆ. ಊರಿಗೆ ಬಂದ್ರೆ ಸಾಕು ಕೊಲೆ ಮಾಡುವುದಾಗಿ ಯುವತಿಯ ಪೋಷಕರು ಹೇಳಿಕೊಂಡು ಓಡುತ್ತಿದ್ದಾರಂತೆ.
ಇದೆ ಕಾರಣಕ್ಕೆ ಇಬ್ಬರು ಪ್ರೇಮಿಗಳು ಮಾತ್ರವಲ್ಲದೆ ಯುವಕನ ಕುಟುಂಬಸ್ಥರೂ ಊರು ಬಿಟ್ಟಿದ್ದಾರೆ. ಇದೆ ಕಾರಣಕ್ಕೆ ಯಾದಗಿರಿ ಎಸ್ ಪಿ ಕಚೇರಿಗೆ ಬಂದ ಪ್ರೇಮಿಗಳು ನಮ್ಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ನಾವಿಬ್ಬರೂ ಪರಸ್ಪರ ಪ್ರೀತಿ ಮಾಡ್ತಾಯಿದ್ದೇವೆ. ಮದುವೆ ಕೂಡ ಆಗುತ್ತೇವೆ. ಇದಕ್ಕೆ ಪೊಲೀಸರ ರಕ್ಷಣೆ ಬೇಕು ನಾವು ಮದುವೆಯಾಗಿ ವಾಪಸ್ ಊರಿಗೆ ಹೋಗಿ ಜೀವನ ಮಾಡಲು ಅನೂಕುಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಒಟ್ನಲ್ಲಿ ಪ್ರೀತಿ ಮಾಡಬಾರದು, ಮಾಡಿದರೆ ಹೆದರಬಾರದು ಎನ್ನುವ ಹಾಗೆ ಈ ಪ್ರೇಮಿಗಳು ಯಾರಿಗೂ ಹೆದರದೆ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಯುವತಿ ಕುಟುಂಬಸ್ಥರು ಮಾತ್ರ ಊರಿಗೆ ಕಾಲಿಟ್ಟರೆ ಸಾಕು ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರಂತೆ. ಹೀಗಾಗಿ ಪೊಲೀಸರು ಸೂಕ್ತ ಭದ್ರತೆಯನ್ನ ನೀಡಿ ಪ್ರೇಮಿಗಳಿಗೆ ಬದುಕಲು ಅನುಕೂಲ ಮಾಡಿಕೊಡಬೇಕಾಗಿದೆ.