ಕಾರವಾರ: ಕಾಂಗ್ರೆಸ್ನ ವಿದ್ಯುತ್ ಉಚಿತ ಗ್ಯಾರಂಟಿ (gruha jyothi yojane) ಘೋಷಣೆ ಹತ್ತಾರು ರೀತಿಯಲ್ಲಿ ಎಫೆಕ್ಟ್ ತಟ್ಟುತ್ತಿದೆ. ಸರ್ಕಾರ ಗ್ಯಾರಂಟಿ ಜಾರಿಗಾಗಿ ತಲೆ ಕೆಡಿಸಿಕೊಂಡಿದ್ದರೆ, ಜನರಂತೂ ಗ್ಯಾರಂಟಿಗಳನ್ನ ಹೇಗೆಲ್ಲ ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ಪರಿಣಾಮ, ಗೃಹಪಯೋಗಿ ವಿದ್ಯುತ್ ಉಪಕರಣಗಳು ಭರ್ಜರಿಯಾಗಿ ಸೇಲ್ ಆಗುತ್ತಿವೆ. 200 ಯುನಿಟ್ ಕರೆಂಟ್ ಫ್ರೀ. ಕಾಂಗ್ರೆಸ್ ಪಾಳೆಯದ ಇಂತದ್ದೇ ಘೋಷಣೆಗಳು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿವೆ. ಜನರಂತೂ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಗ್ಯಾರಂಟಿ (Congress Guarantee) ಜಾರಿಗಾಗಿ ಕಾಯುತ್ತಿದ್ದಾರೆ. ಅದರಲ್ಲೂ, 200 ಯೂನಿಟ್ ವಿದ್ಯುತ್ ಫ್ರೀ ಸಿಗುತ್ತೆ ಎಂದು ಕರೆಂಟ್ ಒಲೆ, ಫ್ಯಾನ್, ಕೂಲರ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಹೌದು…ಸಿಲಿಂಡರ್ ಬೆಲೆ ಗಗನಕ್ಕೇರಿರುವುದರಿಂದ ಹೆಚ್ಚಾಗಿ ಜನ ಗ್ಯಾಸ್ಗೆ ಬೈ ಹೇಳಿ ವಿದ್ಯುತ್ ಒಲೆಗಳ ಮೊರೆ ಹೋಗುತ್ತಿದ್ದಾರೆ. ಯಾಕಂದ್ರೆ ಈ ಹಿಂದೆ ವಿದ್ಯುತ್ ಬಿಲ್ ಜಾಸ್ತಿ ಬುರುತ್ತೆ ಅದನ್ನು ಕಟ್ಟಲಿಲ್ಲ ಅಂದ್ರೆ ಕಟ್ ಮಾಡಿಕೊಂಡು ಹೋಗುತ್ತಾರೆ ಎನ್ನುವ ಭಯ ಜನರಲ್ಲಿ ಇತ್ತು. ಆದ್ರೆ, ಇದೀಗ ಕಾಂಗ್ರೆಸ್ ಗ್ಯಾರಂಟಿಯಿಂದ ಜನರಲ್ಲಿ ವಿದ್ಯುತ್ ಬಿಲ್ನ ಭಯ ಹೋಗಿದೆ.
00 ಯುನಿಟ್ ವಿದ್ಯುತ್ ಬಳಸಿಕೊಳ್ಳಲು ಜನರ ಪ್ಲ್ಯಾನ್!
200 ಯೂನಿಟ್ ಕರೆಂಟ್ ಅನ್ನ ಸಂಪೂರ್ಣ ಬಳಸಿಕೊಳ್ಳೋಕೆ ಜನರೆಲ್ಲ ಪಕ್ಕಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳ್ಳಿ ಮತ್ತು ನಗರ ಪ್ರದೇಶದ ಜನ ಎಲೆಕ್ಟ್ರಿಕ್ ಐಟಮ್ಸ್ಗಳ ಖರೀದಿಗೆ ಮುಂದಾಗಿದ್ದಾರೆ. ಸಿಲಿಂಡರ್ ಬಳಕೆ ಕಡಿಮೆ ಮಾಡಿಕೊಳ್ಳಲು ಕರೆಂಟ್ ಒಲೆಗಳನ್ನ ಖರೀದಿ ಮಾಡುತ್ತಿದ್ದಾರೆ. ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ವಿದ್ಯುತ್ ಒಲೆಗಳ ಮೊರೆ ಹೋಗಿದ್ದಾರೆ. ಇನ್ನು, ಪ್ಯಾನ್, ಕೂಲರ್, ಎಸಿಗಳ ಖರೀದಿ ಭರಾಟೆಯೂ ಜೋರಾಗಿ ನಡೆಯುತ್ತಿದೆ.
ಸದ್ಯ, ಪ್ರತಿ ಮನೆಗಳಲ್ಲಿ ಅಂದಾಜು 35 ರಿಂದ 50 ಯೂನಿಟ್ ಅನ್ನ ಪ್ರತಿ ತಿಂಗಳು ಬಳಸುತ್ತಿದ್ದಾರೆ. ಆದ್ರೆ ಸರ್ಕಾರವೇ 200 ಯೂನಿಟ್ ಉಚಿತ ವಿದ್ಯುತ್ ನೀಡಲು ಸಜ್ಜಾಗಿದೆ. ಹೀಗಾಗಿ, ಉಳಿದ ವಿದ್ಯುತ್ ಅನ್ನೂ ಬಳಸಿಕೊಳ್ಳಲು ವಿದ್ಯುತ್ ಚಾಲಿತ ಯಂತ್ರಗಳ ಮೊರೆ ಹೋಗಿದ್ದಾರೆ. ಹೀಗಾಗಿ ಎಲೆಕ್ಟ್ರಿಕ್ ಸ್ಟೋರ್ಗಳ ಮಾಲೀಕರಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ.
200 ಯುನಿಟ್ ತನಕ ವಿದ್ಯುತ್ ಬಿಲ್ ಬರುವುದಿಲ್ಲ ಎನ್ನುವ ಧೈರ್ಯದಿಂದ ಜನ ಗ್ಯಾಸ್ ಬಿಟ್ಟು ಕರೆಂಡ್ ಒಲೆ, ಎಸಿ ಸೇರಿದಂತೆ ವಿದ್ಯುತ್ ಚಾಲಿತ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಆದ್ರೆ, ಸರ್ಕಾರ ಮುಂದೆ ಫ್ರೀ ವಿದ್ಯುತ್ ಕೊಡದಿದ್ದರೆ ಸಾರ್ವಜನಿಕರು ರಸ್ತೆಗೆ ಇಳಿದು ಪ್ರತಿಭಟನೆ ಮಾಡಬಹುದು. ಸದ್ಯಕ್ಕಂತೂ ಮಾರುಕಟ್ಟೆಯಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳಿನಿಂದ ವಿದ್ಯುತ್ ಚಾಲಿತ ವಸ್ತುಗಳ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ದಿನಮಾನಗಳಲ್ಲೂ ಜನ ಆ ಜೀವನ ಶೈಲಿಗೆ ಹೊಂದಿಕೊಳ್ಳಲಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಬಿಲ್ಗೆ ಹೆದರಿ ಹೆಚ್ಚಾಗಿ ಫ್ಯಾನ್ ಮಾತ್ರ ಬಳಸುತ್ತಿದ್ದರು. ಈಗ ಸರ್ಕಾರವೇ ಫ್ರೀ ಕೊಟ್ಟಿರುವುದರಿಂದ ಈಗ ಎಸಿ, ಕೂಲರ್ ಬಳಸಬಹುದು ಎಂದು ಜನರು ಧೈರ್ಯದಿಂದ ಖರೀದಿ ಮಾಡುತ್ತಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕ ರವಿ ಅವರ ಮಾತು.
ಒಟ್ಟಾರೆ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.. ಇದನ್ನೇ ನಂಬಿ ತಯಾರಿ ಮಾಡಿಕೊಳ್ಳುತ್ತಿರುವ ಜನರಿಗೆ ಸರ್ಕಾರ ಏನ್ ಮಾಡುತ್ತೆ ನೋಡಬೇಕು.