ಹಳಿಯಾಳ : ಭಾರತೀಯ ಸೇನೆಯಲ್ಲಿ ಸುಧೀರ್ಘ 28 ವರ್ಷಗಳ ಅವಿರತ ಸೇವೆಯನ್ನು ಸಲ್ಲಿಸಿ, ನಿವೃತ್ತರಾಗಿ ತಾಯ್ಮಾಡಿಗೆ ಮರಳಿದ ನಿವೃತ್ತ ಯೋಧ ಹಾಗೂ ಹಳಿಯಾಳ ತಾಲ್ಲೂಕಿನ ಕರ್ಲಕಟ್ಟಾ ಗ್ರಾಮದ ನಿವಾಸಿ ರಾಮಚಂದ್ರ ನಾರಾಯಣ ಗೌಡ ಅವರನ್ನು ಇಂದು ಹಳಿಯಾಳ ಪಟ್ಟಣದ ಶಿವಾಜಿ ವೃತ್ತದ ಬಳಿ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಂಡು ಟ್ರಸ್ಟ್ ಪರವಾಗಿ ಗೌರವಿಸಲಾಯ್ತು.
ಈ ಸಂದರ್ಭದಲ್ಲಿ ಶ್ರೀ.ವಿ.ಆರ್.ಡಿ.ಎಂ ಟ್ರಸ್ಟಿನ ಅಧಿಕಾರಿಗಳಾದ ಶ್ರೀಪಾದ್ ಮಾನಗೆ, ಮೌನೇಶ್ ರತ್ಕರ್, ನಿವೃತ್ತ ಸೈನಿಕರಾದ ಅಶೋಕ್ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್, ಪ್ರಮುಖರಾದ ದಿಲೀಪ್ ಪಡ್ನೀಸ್, ಯಮುಕೇಶ್ ಬಾವಿಕಟ್ಟಿ ಹಾಗೂ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.