ಭಟ್ಕಳ ಪುರಸಭೆಯಿಂದ ಆ‌ರ್ ಆರ್‌ ಆರ್ ಕೇಂದ್ರ ಉದ್ಘಾಟನೆ

ಭಟ್ಕಳ: ಕಸ ತ್ಯಾಜ್ಯಗಳ ಉತ್ಪತ್ತಿಗಳನ್ನು ಕಡಿತಗೊಳಿಸುವ, ಪುನರ್
ರೂಪಿಸುವ ಹಾಗೂ
ಮರು ಬಳಕೆ ಮಾಡುವ ಕಾರ್ಯಯೋಜನೆಯನ್ನು
ಭಾಗವಾಗಿ ಇಲ್ಲಿನ ಪುರಸಭಾ ಕಚೇರಿಯ ಪಕ್ಕದಲ್ಲಿ ಸ್ಥಾಪಿಸಲಾದ (ರೆಡ್ಯೂಸ್,ರಿಸೈಕಲ್ ರಿಯೂಸ್ ಕೇಂದ್ರವನ್ನು ಸಹಾಯಕ ಆಯುಕ್ತ ಮಮತಾದೇವಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಸ್ವಚ್ಛ ವಾತಾವರಣ ನಿರ್ವಾಣ ಅಗತ್ಯವಾಗಿದ್ದು, ಯಾವುದೇ ವಸ್ತು ನಿರುಪಯುಕ್ತಗೊಳಿಸುವ ಮುನ್ನ ಚಿಂತನೆ ಅಗತ್ಯವಾಗಿದೆ. ಬಟ್ಟೆಬರೆ, ದಿನಪತ್ರಿಕೆಗಳಂತಹ ವಸ್ತುಗಳನ್ನು ಆರ್‌ಆರ್‌ ಆ‌ರ್ ಕೇಂದ್ರದ ಮೂಲಕ ಪುನರ್ ಬಳಕೆಗೆ ಅವಕಾಶ ಮಾಡಿಕೊಡಬಹುದಾಗಿದೆ.
ಇದರಿಂದ ಬಡ ಜನರಿಗೂ ನೆರವು ಸಿಗಲಿದೆ.
ಭಟ್ಕಳದಲ್ಲಿ ತಾಲೂಕು ಆಡಳಿತ ಸೌಧ, ಲೈಫ್‌ ಕೇರ್ ಆಸ್ಪತ್ರೆ ಸಮೀಪ ಆರ್‌ಆರ್‌ಆ‌ರ್ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಈ ಅರ್ಥ ಪೂರ್ಣ ಕಾರ್ಯಕ್ರಮದ ಪ್ರಯೋಜನ ಎಲ್ಲರಿಗೂ ಸಿಗುವಂತಾಗಬೇಕು ಎಂದರು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್‌ ಅಜೀಮ್‌, ಸದಸ್ಯರಾದ
ಕೈಸರ್ ಮೊತೆಶಮ್, ಅಬ್ಬಲ್ ರವೂಫ್ ನಾಯಿತೇ, ಕೃಷ್ಣಾನಂದ ಪೈ, ಮುಲ್ಲಾ ಆಕ್ರೋಜ್ ಉಪಸ್ಥಿತರಿದ್ದರು. ಪುರಸಭಾ ಪ್ರಭಾರ ಮುಖ್ಯಾಧಿಕಾರಿ ಅರುಣ ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು. ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಕಿರಣ್ ವಂದಿಸಿದರು.