Mysuru crime: 25 ಕೋಟಿ ರೂ ಮೌಲ್ಯದ ತಿಮಿಂಗಲ ವಾಂತಿ ಮಾರಲು ಯತ್ನ, ಕೇರಳ ಮೂಲದ ಮೂವರ ಬಂಧನ

ಹೆಚ್‌ಡಿ ಕೋಟೆ (ಮೇ.23) ಹೆಚ್‌ಡಿ ಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 25 ಕೋಟಿ ರೂ. ಬೆಲೆಬಾಳುವ ತಿಮಿಂಗಿಲದ ಅಪರೂಪದ ಅಂಬರ್ ಗ್ರೀಸ್ ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಮೂವರು ಆರೋಪಿಗಳು ಕೋಟ್ಯಂತರ ರೂ. ಮೌಲ್ಯದ ಅಂಬರ್‌ ಗ್ರೀಸ್ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಹೆಚ್‌ಡಿ ಕೋಟೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಗಳ ಸಮೇತ ಕಾರಿನಲ್ಲಿ ಮಾರಾಟಕ್ಕಿಟ್ಟಿದ್ದ ಒಂಭತ್ತುವರೆ ಕೆಜಿ ಅಪರೂಪದ ಅಂಬರ್ ಗ್ರೀಸ್ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ಅಡಿಷಿನಲ್  ಎಸ್ಪಿ ನಂದಿನಿ ಡಿವೈಎಸ್ ಪಿ ಮಹೇಶ್ ಮಾರ್ಗದರ್ಶನದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.

ಹೆಚ್.ಡಿ.ಕೋಟೆ ಇನ್ಸ್ ಪಕ್ಟರ್ ಶಭ್ಬೀರ್ ಹುಸೇನ್ ಮೈಸೂರು ಕ್ರೈಂಬ್ರಾಚ್ ಇನ್ಸ್ ಪೆಕ್ಟರ್ ಪುರುಷೋತ್ತಮ ತಂಡದಿಂದ ಕಾರ್ಯಾಚರಣೆ.ಹೆಚ್‌ಡಿ ಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಸಮವಸ್ತ್ರ ಧರಿಸದೆ ಸಾಧಾರಣ ವ್ಯಕ್ತಿಗಳಂತೆ ಹೋಗಿ ಆರೋಪಿಗಳ ಬಂಧಿಸಲಾಗಿದೆ.

ಆರೋಪಿಗಳು ಕೇರಳದ ಕೊಚ್ಚಿನ್ ಸಮುದ್ರದಿಂದ ತಿಮಿಂಗಿಲದ ಅಂಬರ್ ಗ್ರೀಸ್ ತಂದಿರುವ ಮಾಹಿತಿ ಲಭ್ಯವಾಗಿದ್ದು, ಬಂಧಿತರಾದ ಒಟ್ಟು ಮೂವರು ಪೈಕಿ ಒಬ್ಬ ಹಡಗು ನಡೆಸುವ ನಾವಿಕನೂ ಸೇರಿದ್ದಾನೆ.

ಮಾರಾಟ ಮಾಡಲು ಯತ್ನಿಸಿದ್ದ ಅಂಬರ್‌ ಗ್ರೀಸ್ ಎಂದು ಖಚಿತಪಡಿಸಿರುವ ಆರಣ್ಯ ಇಲಾಖೆ. ಅಂಬರ್ ಗ್ರೀಸ್ ಎಂದು ಕರೆಯುವ ತಿಮಿಂಗಿಲ ವಾಂತಿಗೆ ವಿದೇಶದಲ್ಲಿ ಅಪಾರ ಪ್ರಮಾಣದಲ್ಲಿ ಬೇಡಿಕೆ ಮತ್ತು ಅಧಿಕ ಕೋಟ್ಯಂತರ ರೂ ಬೆಲೆ ಇದೆ.

ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್.ಡಿ.ಕೋಟೆ ಪೋಲೀಸರ ಮಿಂಚಿನ ಕಾರ್ಯಾಚರಣೆಗೆ ಕಾರ್ಯಾಚರಣೆಗೆ ಚಾಕಚಕ್ಯತೆ ಕಂಡು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.