ಬ್ಯಾಗ್ನಲ್ಲಿ ರೈಫಲ್, ಊಟದ ಬಾಕ್ಸ್‌ನಲ್ಲಿ ಮದ್ದುಗುಂಡುಗಳನ್ನು ತಂದಿದ್ದ ಶಾಲಾ ವಿದ್ಯಾರ್ಥಿಯನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. AR-15 ಅರೆ-ಸ್ವಯಂಚಾಲಿತ ರೈಫಲ್ ಮತ್ತು ಮದ್ದುಗುಂಡುಗಳನ್ನು ಊಟದ ಬಾಕ್ಸ್‌ನಲ್ಲಿ ಬಚ್ಚಿಟ್ಟ ಆರೋಪದ ಮೇಲೆ US ಫೀನಿಕ್ಸ್‌ನಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು CNN ವರದಿ ಮಾಡಿದೆ.
ಶಾಲಾ ಶಿಕ್ಷಕರು ಮಾಹಿತಿ ಮೇರೆಗೆ ವಿದ್ಯಾರ್ಥಿಯಿಂದ ಪೊಲೀಸತು ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಾಲೆಯ ಆವರಣದಲ್ಲಿ ರೈಫಲ್ ಇದೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಶಾಲೆಯನ್ನು ಮುಚ್ಚಲಾಯಿತು. ಗಂಟೆಗಳಿಗೂ ಕಾಲ ಹೊರಗಿನಿಂದ ಯಾರೂ ಬರದಂತೆ ಶಾಲೆಯಿಂದ ಯಾರೂ ಹೊರಹೋಗದಂತೆ ನೋಡಿಕೊಳ್ಳಲಾಯಿತು.
ಶಾಲೆಗೆ ರೈಫಲ್ ತಂದಿದ್ದಕ್ಕಾಗಿ ವಿದ್ಯಾರ್ಥಿಯನ್ನು ಬಂಧಿಸಲಾಯಿತು, ಊಟದ ಡಬ್ಬಿಯಲ್ಲಿ ಮದ್ದುಗುಂಡುಗಳು ಕೂಡ ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಂತರ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬಾಲಕನಿಗೆ ರೈಫಲ್ ಹೇಗೆ ಸಿಕ್ಕಿತು, ಅದನ್ನು ಶಾಲೆಗೆ ತಂದ ಉದ್ದೇಶ ಏನು ಎಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.